ಆಗಸ್ಟ್‌ 5ಕ್ಕೆ ಉತ್ತರ ಪ್ರಾಂತ ಅಭ್ಯಾಸ ವರ್ಗ

7
ಭಾರತೀಯ ಶಿಕ್ಷಣ ಮಂಡಲ: ಡಾ.ಅರವಿಂದ ಜೋಶಿ ಚಾಲನೆ

ಆಗಸ್ಟ್‌ 5ಕ್ಕೆ ಉತ್ತರ ಪ್ರಾಂತ ಅಭ್ಯಾಸ ವರ್ಗ

Published:
Updated:

ಬಾಗಲಕೋಟೆ: ಭಾರತೀಯ ಶಿಕ್ಷಣ ಮಂಡಲ ಉತ್ತರ ಪ್ರಾಂತದ ಅಭ್ಯಾಸ ವರ್ಗ ಆಗಸ್ಟ್ 5ರಂದು ಇಲ್ಲಿನ ಬಿ.ವಿ.ವಿ ಸಂಘದ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದಲ್ಲಿ ನಡೆಯಲಿದೆ.

ಉತ್ತರ ಕರ್ನಾಟಕದ 13 ಜಿಲ್ಲೆಗಳ ಕಾರ್ಯಕರ್ತರಿಗಾಗಿ ಒಂದು ದಿನದ ಅಭ್ಯಾಸ ವರ್ಗ ಏರ್ಪಡಿಸಲಾಗಿದೆ. ನಾಗಪುರದ ಕಾಳಿದಾಸ ಸಂಸ್ಕ್ರತ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅರವಿಂದ ಜೋಶಿ ಅಭ್ಯಾಸ ವರ್ಗದ ಉದ್ಘಾಟನೆ ಮಾಡಲಿದ್ದಾರೆ. ವಿವಿಧ ಗೋಷ್ಠಿಗಳ ನಂತರ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಸಮಾರೋಪ ಭಾಷಣ ಮಾಡಲಿದ್ದಾರೆ.

ಭಾರತೀಯ ಶಿಕ್ಷಣ ಮಂಡಲವು ಒಂದು ರಾಷ್ಡೀಯ ಸಂಸ್ಥೆಯಾಗಿದೆ. ದೇಶದ ಪುನರುತ್ಥಾನಕ್ಕೆ ಪೂರಕವಾದ ಶಿಕ್ಷಣ ನೀತಿ, ಪಠ್ಯವಸ್ತು ಮತ್ತು ಪದ್ದತಿಗಳನ್ನು ರೂಪಿಸುವುದು ಈ ಸಂಸ್ಥೆಯ ಉದ್ದೇಶ.

ಸಂಶೋಧನೆ, ಜಾಗರಣೆ, ಪ್ರಶಿಕ್ಷಣ, ಪ್ರಕಾಶನ ಮತ್ತು ಸಂಘಟನಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಅಲ್ಲದೆ ದೇಶ ವ್ಯಾಪ್ತಿಯಲ್ಲಿ ನೂರಾರು ಮಹಿಳಾ ಪ್ರಕಲ್ಪ, ಯುವ ಆಯಾಮ, ಗುರುಕುಲ ಪ್ರಕಲ್ಪ, ಆನಂದ ಶಾಲಾ ಮತ್ತು ಶೈಕ್ಷಣಿಕ ಪ್ರಕಲ್ಪಗಳನ್ನು ನಡೆಸಿಕೊಂಡು ಬರುತ್ತಿದೆ.

ದೇಶದ 22 ರಾಜ್ಯಗಳ 220 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅಭ್ಯಾಸ ವರ್ಗದ ವ್ಯವಸ್ಥಾ ಪ್ರಮುಖ ಪ್ರಾಂತ ಸಂಯೋಜಕರಾದ ಮಾರುತಿ ಪಾಟೋಳಿ ಹಾಗೂ ಶ್ರೀನಿವಾಸ ಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !