ಲಕ್ಷ್ಮೀಸಾಗರ ಕೆರೆ ನೀರು ಸಂಗ್ರಹ

7

ಲಕ್ಷ್ಮೀಸಾಗರ ಕೆರೆ ನೀರು ಸಂಗ್ರಹ

Published:
Updated:
Deccan Herald

ಕೋಲಾರ: ಕೆಸಿ ವ್ಯಾಲಿ ನೀರು ಹರಿದ ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆಗೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಹೈಕೋರ್ಟ್ ಆದೇಶದ ಮೇರೆಗೆ ಶನಿವಾರ ಭೇಟಿ ನೀಡಿ, ಗುಣಮಟ್ಟ ಪರೀಕ್ಷೆಗಾಗಿ ನೀರನ್ನು ಸಂಗ್ರಹಿಸಿಕೊಂಡರು.

ಹೈಕೋರ್ಟ್ ಕೆಸಿ ವ್ಯಾಲಿ ಯೋಜನೆಯ ನೀರಿನ ಗುಣಮಟ್ಟದ ಕುರಿತು ಆ.16ರಂದು ದಾಖಲೆ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದು, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ನೀರು ಸಂಗ್ರಹಿಸಿಕೊಂಡರು.

ಕೆಸಿ ವ್ಯಾಲಿ ನೀರಿನಲ್ಲಿ ಪರಿಸರಕ್ಕೆ ಮಾರಕವಾದ ನೊರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು ಮತ್ತು ನೀರಿನ ಶುದ್ದತೆ ಪ್ರಶ್ನಿಸಿ ಶಾಶ್ವತ ನೀರಾವರಿ ಹೋರಾಟಗಾರರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಬೆಂಗಳೂರಿನ ಕೋರಮಂಗಲ, ಚಲ್ಲಘಟ್ಟ ವ್ಯಾಲಿನ ನೀರಿನ ಗುಣಮಟ್ಟದ ಕುರಿತು ಹೈಕೋರ್ಟ್‌ ವರದಿ ನೀಡುವವರೆಗೂ ಕೆರೆಗಳಿಗೆ ನೀರು ಹರಿಸದಂತೆ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಸಣ್ಣ ನೀರಾವರಿ ಇಲಾಖೆ, ಕೇಂದ್ರ ಅಂತರ್ಜಳ ಅಭಿವೃದ್ದಿ ಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಅಧಿಕಾರಿಗಳ ತಂಡ ಭೇಟಿ ನೀಡಿ ಕೆರೆ ಪರಿಶೀಲಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !