‘ಒಂದೇ ಜಾತಿಗೆ ಸೀಮಿತವಾದ ಜಗದ್ಗುರುಗಳು’

7

‘ಒಂದೇ ಜಾತಿಗೆ ಸೀಮಿತವಾದ ಜಗದ್ಗುರುಗಳು’

Published:
Updated:

ಮಂಡ್ಯ: ‘ಸ್ವಾಮೀಜಿಗಳು ಜಗದ್ಗುರು ಎಂದು ನಾಮಫಲಕ ಹಾಕಿಕೊಂಡಿದ್ದಾರೆ. ಆದರೆ ಅವರು ಜಗತ್ತಿಗೆ ಗುರುವಾಗುವ ಬದಲು ಒಂದು ಜಾತಿಗೆ ಸೀಮಿತವಾಗಿದ್ದಾರೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹೇಳಿದರು.

ಕನ್ನಡಸೇನೆ ವತಿಯಿಂದ ಮಂಗಳವಾರ ನಗರದ ಗಾಂಧಿಭವನದಲ್ಲಿ ನಡೆದ ‘ಅಖಂಡ ಕರ್ನಾಟಕ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಾವಿರಾರು ಜನರ ಶ್ರಮವಿದೆ. ಆದರೆ ಸ್ವಾಮೀಜಿಗಳು ರಾಜ್ಯ ಒಡೆಯುವ ಅವಿವೇಕದ ಮಾತುಗಳನ್ನಾಡುತ್ತಿದ್ದಾರೆ. ಈಗಷ್ಟೇ ಹೊಸ ಸರ್ಕಾರ ಬಂದಿದೆ. ಕೊಟ್ಟ ಮಾತಿಗೆ ಕಟ್ಟು ಬಿದ್ದು ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರದಲ್ಲಿ ಹಣದ ಕೊರತೆಯಾಗಿದೆ. ಹೀಗಾಗಿ ಉತ್ತರ ಕರ್ನಾಟಕದ ಸ್ವಾಮೀಜಿಗಳು, ಮುಖಂಡರು ತಾಳ್ಮೆಯಿಂದ ಇರಬೇಕು. ರಾಜ್ಯ ಒಡೆಯುವ ಹೇಳಿಕೆಗಳನ್ನು ಕೈಬಿಡಬೇಕು’ ಎಂದು ಹೇಳಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಸರ್ಕಾರಗಳು ಕ್ಯಾಂಟೀನ್‌ ಮೂಲಕ ಅನ್ನ ಹಾಗೂ ಉಚಿತ ಅಕ್ಕಿ ನೀಡುವ ಬದಲು ಬಡವರಿಗೆ ಭೂಮಿ ಕೊಟ್ಟು ಅನ್ನ ಬೆಳೆಯುವ ಅವಕಾಶ ನೀಡಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಉತ್ತಮ ಮಾರುಕಟ್ಟೆ ಸೌಲಭ್ಯ ಒದಗಿಸಬೇಕು’ ಎಂದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !