ಸಧೃಡ ಆರೋಗ್ಯಕ್ಕೆ ಜಂತುಹುಳು ನಿವಾರಿಸಿ

7

ಸಧೃಡ ಆರೋಗ್ಯಕ್ಕೆ ಜಂತುಹುಳು ನಿವಾರಿಸಿ

Published:
Updated:

ಸಂತೇಬೆನ್ನೂರು: ಮಕ್ಕಳಲ್ಲಿ ಜಂತು ಹುಳು ಹೋಗಲಾಡಿಸಲು ಪೋಷಕರು ಜಾಗೃತರಾಗಬೇಕು ಎಂದು ಆಶಾ ಕಾರ್ಯಕರ್ತೆ ಗೀತಾಮಣಿ ತಿಳಿಸಿದರು.

 ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಂತು ಹುಳುಗಳಿಂದ ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ, ನಿಶ್ಯಕ್ತಿ, ಆತಂಕ ಉಂಟಾಗುತ್ತದೆ. ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರ, ಬಳಲಿಕೆ, ತೂಕ ಕಡಿಮೆ ಆಗಲಿವೆ. ಜಂತು ನಿವಾರಣೆಗೆ ಇದೇ 10ರಂದು ಶಾಲಾ ಮಕ್ಕಳಿಗೆ ಮಾತ್ರೆ ವಿತರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

 ಆಶಾ ಕಾರ್ಯಕರ್ತೆ ಸೌಮ್ಯ, ಮುಖ್ಯ ಶಿಕ್ಷಕ ಕೆ. ಚಂದ್ರಪ್ಪ, ಕೆ.ಬಿ. ತಿಪ್ಪಣ್ಣ ಹಾಜರಿದ್ದರು.

 

 

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !