ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ | ದೇಬ್ರಾಜ್‌ ಶತಕ: ಡಿಪಿಎಸ್‌ ತಂಡಕ್ಕೆ ಸುಲಭ ಜಯ

Published 26 ಏಪ್ರಿಲ್ 2024, 16:23 IST
Last Updated 26 ಏಪ್ರಿಲ್ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ದೇಬ್ರಾಜ್ ಅವರ ಅಮೋಘ ಶತಕದ ನೆರವಿನಿಂದ ಡಿಪಿಎಸ್‌ ಸೌತ್‌ ತಂಡವು ಟೈಗರ್‌ ಕಪ್‌ 14 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಪ್ಯಾಂಥರ್ಸ್ ಕ್ರಿಕೆಟ್ ಅಕಾಡೆಮಿ ವಿರುದ್ಧ 195 ರನ್‌ಗಳ ಸುಲಭ ಜಯ ದಾಖಲಿಸಿತು.

‌ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಕ್ರಿಕೆಟ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ದೇಬ್ರಾಜ್‌ ಗಳಿಸಿದ 199 ರನ್‌ಗಳ ಬಲದಿಂದ ಡಿಪಿಎಸ್‌ ತಂಡವು 30 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 297 ರನ್‌ ಸೇರಿಸಿತು. ಇದಕ್ಕೆ ಉತ್ತರವಾಗಿ ಪ್ಯಾಂಥರ್ಸ್‌ ತಂಡವು 28.1 ಓವರ್‌ಗಳಲ್ಲಿ 102 ರನ್‌ಗೆ ಕುಸಿಯಿತು.

ಸಂಕ್ಷಿಪ್ತ ಸ್ಕೋರ್‌: ಡಿಪಿಎಸ್‌ ಸೌತ್‌: 30 ಓವರ್‌ಗಳಲ್ಲಿ 4 ವಿಕೆಟ್‌ಗೆ 297 (ದೇಬ್ರಾಜ್ 199, ಅರ್ಹಾನ್ ಖಾನ್ 32) ಪ್ಯಾಂಥರ್ಸ್ ಕ್ರಿಕೆಟ್ ಅಕಾಡೆಮಿ: 28.1 ಓವರ್‌ಗಳಲ್ಲಿ 102  (ಸಮರ್ಥ್ ರತೀಶ್ 3ಕ್ಕೆ1, ವಯಾನ್ ಜೋಶಿ 19ಕ್ಕೆ 2). ಫಲಿತಾಂಶ: ಡಿಪಿಎಸ್‌ ತಂಡಕ್ಕೆ 195 ರನ್‌ಗಳ ಜಯ.

ಕ್ರೀಡಾ ಕ್ಷೇತ್ರ: 27.2 ಓವರ್‌ಗಳಲ್ಲಿ 124 (ನಚಿಕೇತ್ 29; ಆದಿತ್ಯ ಕುಮಾರ್ 8ಕ್ಕೆ 5). ಡಿಪಿಎಸ್ ಈಸ್ಟ್: 21.4 ಓವರ್‌ಗಳಲ್ಲಿ 4 ವಿಕೆಟ್‌ಗೆ 127 (ರಿಯಾನ್ ಥಾಮರ್ 46, ನೀರಜ್ 40). ಫಲಿತಾಂಶ: ಡಿಪಿಎಸ್‌ ಈಸ್ಟ್‌ ತಂಡಕ್ಕೆ 6 ವಿಕೆಟ್‌ ಜಯ.

ಜೆಎಸ್‌ಎಸ್‌ ಕ್ರಿಕೆಟ್‌ ಮೈದಾನ: ಪ್ಲೇ ಸ್ಮಾರ್ಟ್‌: 30 ಓವರ್‌ಗಳಲ್ಲಿ 4 ವಿಕೆಟ್‌ಗೆ 205 (ಸೌಮ್ ಜೋಶಿ 98, ಸಚಿತ್ ಶೆಟ್ಟಿ 50; ಕಹಾನ್ ಹಲಿನಿ 32ಕ್ಕೆ 2). ಸ್ಕೂಲ್‌ ಆಫ್‌ ಕ್ರಿಕೆಟ್‌: 28.1 ಓವರ್‌ಗಳಲ್ಲಿ 120 (ರೌನಕ್ ಪಲಿವಾಲ್ 34; ಸಾಯಿ ವಿಕ್ರಾಂತ್‌ 14ಕ್ಕೆ 3, ತೇಜಸ್‌ ಎಸ್‌. ಭಟ್‌ 15ಕ್ಕೆ 2, ಲಿಥಿಕ್‌ ರೆಡ್ಡಿ 16ಕ್ಕೆ 2). ಫಲಿತಾಂಶ: ಪ್ಲೇ ಸ್ಮಾರ್ಟ್‌ ತಂಡಕ್ಕೆ 85 ರನ್‌ಗಳ ಜಯ.

ಕೆಸಿಸಿ ಗುರುಕುಲ್‌: 27.5 ಓವರ್‌ಗಳಲ್ಲಿ 143 (ನವತೇಜ್ ರೆಡ್ಡಿ 32; ಸಚಿನ್ ರಾಜ್ 15ಕ್ಕೆ 3, ಹರ್ಷ ಎಲ್. 11ಕ್ಕೆ 2). ಆರ್‌ಸಿಎ ಮೈಸೂರು: 30 ಓವರ್‌ಗಳಲ್ಲಿ 9 ವಿಕೆಟ್‌ಗೆ 140 (ಯಶವಂತ್‌ ಗೌಡ್‌ 33; ಹರ್ಷಿತ್‌ ಬಿ. 18ಕ್ಕೆ 2). ಫಲಿತಾಂಶ: ಕೆಸಿಸಿ ಗುರುಕುಲ್‌ ತಂಡಕ್ಕೆ 3 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT