ಗಮನ ಸೆಳೆದ ಸಾಮಾಜಿಕ ಹೋರಾಟಗಾರ

7

ಗಮನ ಸೆಳೆದ ಸಾಮಾಜಿಕ ಹೋರಾಟಗಾರ

Published:
Updated:
Deccan Herald

ಚಿಕ್ಕಬಳ್ಳಾಪುರ: ನಗರದಲ್ಲಿ ಸೋಮವಾರ ಸಾರ್ವಜನಿಕರು ಅಂಗಡಿಗಳನ್ನು ಮುಚ್ಚಿ ಭಾರತ ಬಂದ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದರೆ ಇನ್ನೊಂದೆಡೆ ಸಾಮಾಜಿಕ ಹೋರಾಟಗಾರ ನಂದಿ ಪುರುಷೋತ್ತಮ್ ಅವರು ನಗರದ ಮುಖ್ಯರಸ್ತೆಯಲ್ಲಿಯೇ ‘ಇದು ಭಾರತ ಬಂದ್ ಅಲ್ಲ. ಕಾಂಗ್ರೆಸ್‌ನ ಬಣ್ಣದ ರಾಜಕಾರಣ’ ಎಂಬ ಫಲಕಗಳನ್ನು ಅಳವಡಿಸಿ ಗಮನ ಸೆಳೆದರು.

ಈ ಕುರಿತು ಅವರನ್ನು ವಿಚಾರಿಸಿದರೆ, ‘ಕಾಂಗ್ರೆಸ್ ಕರೆ ನೀಡಿರುವ ಬಂದ್ ಉಪಯೋಗವಿಲ್ಲದ್ದು. ಏಕೆಂದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಆಧಾರದಲ್ಲಿ ತೈಲ ಬೆಲೆ ಏರಿಳಿತವಾಗುತ್ತದೆ. ಕೇಂದ್ರ ಸರ್ಕಾರ ತೈಲದ ಮೇಲೆ ಶೇ 16ರಷ್ಟು ತೆರಿಗೆ ವಿಧಿಸಿದರೆ, ರಾಜ್ಯ ಸರ್ಕಾರ ಶೇ36 ರಿಂದ ಶೇ 38 ರಷ್ಟು ತೆರಿಗೆ ವಿಧಿಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇತರ ರಾಜ್ಯಗಳಿಗಿಂತ ಹೆಚ್ಚಾಗಿದೆ’ ಎಂದು ಹೇಳಿದರು.

‘ಇವತ್ತು ತೈಲದ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸುವವರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಅವರ ಕ್ರಮದ ಬಗ್ಗೆ ಚಕಾರ ಎತ್ತುವುದಿಲ್ಲ. ಇದೆಷ್ಟರಮಟ್ಟಿಗೆ ನ್ಯಾಯಸಮ್ಮತ ಬಂದ್ ಆಗುತ್ತದೆ? ರಾಜ್ಯ ಸರ್ಕಾರ ಇಂತಹ ಕುಂಟು ನೆಪ ಇಟ್ಟುಕೊಂಡು ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಂದ್‌ಗೆ ಕುಮ್ಮಕ್ಕು ನೀಡಿದೆ’ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !