ನಟಿ ಕಿಯಾರ ಉಬ್ಬಿದ ಕೆನ್ನೆ ಪುರಾಣ

7

ನಟಿ ಕಿಯಾರ ಉಬ್ಬಿದ ಕೆನ್ನೆ ಪುರಾಣ

Published:
Updated:

‘ಕಿಯಾರ ಅಡ್ವಾಣಿ ಮುಖದ ಸರ್ಜರಿ ಮಾಡಿಸಿಕೊಂಡಿದ್ದರೆಯೇ? ಅದರಿಂದ ಅವರ ಕೆನ್ನೆಗಳು ಉಬ್ಬಿಕೊಂಡು ಅಸಹ್ಯವಾಗಿ ಕಾಣಿಸುತ್ತಿದೆಯೇ?’

ಬಾಲಿವುಡ್‌ ನಟಿ ಕಿಯಾರ ಅಡ್ವಾಣಿಯ ಕೆನ್ನೆ ಹಾಗೂ ಸರ್ಜರಿ ಕುರಿತಾಗಿ ಕುತೂಹಲಭರಿತ, ಸ್ವಾರಸ್ಯಕರ ಚರ್ಚೆ ಇನ್‌ಸ್ಟಾಗ್ರಾಂನಲ್ಲಿ ಈಚೆಗೆ ನಡೆದಿದೆ. 

ಕಿಯಾರ ಪೋಸ್ಟ್‌ ಮಾಡಿದ್ದ ಫೋಟೊದಲ್ಲಿ ಅವರ ಕೆನ್ನೆಯು ಗುಂಡಾಗಿ ಉಬ್ಬಿಕೊಂಡಿದ್ದನ್ನು ಗಮನಿಸಿ ಆಕೆಯ ಅಭಿಮಾನಿಗಳು ‘ಪ್ಲಾಸ್ಟಿಕ್‌ ಸರ್ಜರಿ ಮಾಡುವಾಗ ಎಡವಟ್ಟಾಗಿದೆ’ ಎಂದು ಕಮೆಂಟ್‌ ಮಾಡಿದರೆ, ಕೆಲವರು ‘ಅಷ್ಟೊಂದು ಸುಂದರಿಯಾಗಿದ್ದ ಮೇಲೂ ಕಿಯಾರ ಯಾಕೆ ಸರ್ಜರಿ ಮಾಡಿಸಿಕೊಳ್ಳಬೇಕಿತ್ತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಈಚೆಗೆ ಶ್ವೇತಾ ಬಚ್ಚನ್‌ ನಂದಾ ಹಾಗೂ ಮೋನೀಶಾ ಜೈಸಿಂಗ್‌ ಅವರ ಫ್ಯಾಷನ್‌ ಲೇಬಲ್ ಉದ್ಘಾಟನೆ ಸಮಾರಂಭದಲ್ಲಿ ಕಿಯಾರ ಪಾಲ್ಗೊಂಡಿದ್ದರು. ಅವರು ಕಪ್ಪು ಬಣ್ಣದ ಲೇಸ್‌ನ ಜಂಪ್‌ಸೂಟ್‌ ಧರಿಸಿದ್ದರು. ಅಲ್ಲಿ ತೆಗೆಸಿಕೊಂಡ ಫೋಟೊಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ಅವರ ಮುಖದಲ್ಲಿ ಕೊಂಚ ಬದಲಾವಣೆಯಾಗಿರುವುದನ್ನು ಅವರ ಅಭಿಮಾನಿಗಳು ಗಮನಿಸಿ ನಾನಾ ರೀತಿ ಕಮೆಂಟ್‌ ಮಾಡಿದ್ದಾರೆ. ‘ಯಾಕೆ ಕಿಯಾರ ಅಡ್ವಾಣಿ...ನಾನು ಈ ಡಾಕ್ಟರ್‌ರಿಂದ ಸರ್ಜರಿ ಮಾಡಿಸಿಕೊಳ್ಳುವುದೇ ಇಲ್ಲಪ್ಪ...ಭಯಾನಕವಾಗಿದೆ’ ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಮತ್ತೊಬ್ಬರು, ‘ಕೆನ್ನೆ ಸರ್ಜರಿ ಅಸಹ್ಯವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. 

ಈ ನಟಿಯ ಕಟ್ಟಾ ಅಭಿಮಾನಿಯೊಬ್ಬರು ‘ಈ ಎಲ್ಲಾ ಚರ್ಚೆಗಳನ್ನು ನಿಲ್ಲಿಸಿ. ನಟಿ ಇತ್ತೀಚೆಗೆ ಕೊಂಚ ದಪ್ಪಗಾಗಿದ್ದಾರೆ. ಹಾಗಾಗಿ ಅವರ ಕೆನ್ನೆ ಊದಿಕೊಂಡಂತೆ ಕಾಣುತ್ತದೆ’ ಎಂದರೆ, ಕೆಲ ಮಂದಿ ಉಬ್ಬಿಕೊಂಡ ಕೆನ್ನೆಯಲ್ಲೂ ಕಿಯಾರಾ ಎಷ್ಟು ಸುಂದರಿಯಾಗಿ ಕಾಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಈ ಪ್ರತಿಕ್ರಿಯೆಗಳಿಗೆ ಇನ್‌ಸ್ಟಾಗ್ರಾಂನಲ್ಲಿ ಕಿಯಾರಾ ಕೊನೆಗೂ ಸ್ಪಷ್ಟನೆ ನೀಡಿ, ಅವರ ಅನುಮಾನಗಳನ್ನು ಬಗೆಹರಿಸಿದ್ದಾರೆ. ‘ವಾಹ್‌! ಇಷ್ಟು, ಈ ಕಮೆಂಟ್‌ಗಳನ್ನು ನೋಡಿದ ಮೇಲೆ ನಾನು ಪ್ರತಿಕ್ರಿಯಿಸಲೇಬೇಕು. ಯಾರೂ ಅಂತಿಮ ತೀರ್ಮಾನಕ್ಕೆ ಬರಬೇಡಿ. ನನ್ನ ಕೆನ್ನೆ ಉಬ್ಬಿಕೊಂಡು ದುಂಡುದುಂಡಗೆ ಕಾಣುತ್ತಿದೆ. ಇದಕ್ಕೆ ಕಾರಣ ಬಿರಿಯಾನಿ. ಕಳೆದ ರಾತ್ರಿಯೂ ನಾನು ಬಿರಿಯಾನಿಯನ್ನೇ ತಿಂದಿದ್ದೆ. ಈಚೆಗೆ ಜಾಸ್ತಿ ತಿಂದಿದ್ದರಿಂದ ಉಬ್ಬಿಕೊಂಡಿದೆ. ಯಾವ ಡಾಕ್ಟರ್‌ ಬಳಿಯೂ ನಾನು ಕೆನ್ನೆ ಸರ್ಜರಿ ಮಾಡಿಸಿಕೊಂಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.  ⇒

v

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !