ಬಿಜೆಪಿಯವರ ಹಗಲುಗನಸು ನನಸಾಗದು: ಎನ್‌.ಎಚ್.ಶಿವಶಂಕರರೆಡ್ಡಿ

7

ಬಿಜೆಪಿಯವರ ಹಗಲುಗನಸು ನನಸಾಗದು: ಎನ್‌.ಎಚ್.ಶಿವಶಂಕರರೆಡ್ಡಿ

Published:
Updated:

ಚಿಕ್ಕಬಳ್ಳಾಪುರ: ‘ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯವರ ಹಗಲುಗನಸು ನನಸಾಗಲ್ಲ. ಸಮ್ಮಿಶ್ರ ಸರ್ಕಾರ ಚೆನ್ನಾಗಿಯೇ ಇದೆ. ಮಾಧ್ಯಮದವರೇ ಬೆಳಿಗ್ಗೆ ಒಂದು ಸಂಜೆ ಒಂದೊಂದು ರೀತಿ ಹೇಳುತ್ತಿದ್ದಿರಿ’ ಎಂದು ಕೃಷಿ ಸಚಿವ ಎನ್‌.ಎಚ್.ಶಿವಶಂಕರರೆಡ್ಡಿ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮ್ಮಿಶ್ರ ಸರ್ಕಾರದ ಭಾಗಿ ಪಕ್ಷಗಳಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಸಾಮಾನ್ಯ. ಈ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ಶಕ್ತಿ ಎರಡು ಪಕ್ಷಕ್ಕಿದೆ. ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್,- ಜೆಡಿಎಸ್ ಒಂದಾಗಿವೆ. ಕರ್ನಾಟಕದ ಮಾದರಿ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ’ ಎಂದು ತಿಳಿಸಿದರು.

‘ಜಿಲ್ಲಾ ಮಟ್ಟದಲ್ಲಿ ಜಾರಕಿಹೊಳಿ ಸಹೋದರರಿಗೆ ಭಿನ್ನಾಭಿಪ್ರಾಯ, ರಾಜಕೀಯ ವ್ಯತ್ಯಾಸಗಳಿವೆ. ಪಕ್ಷ ಹಾಗೂ ಸರ್ಕಾರದ ವಿರುದ್ಧ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !