ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ಆರೋಪ: ಇಳಕಲ್ ಪಿಎಸ್‌ಐ ವಿರುದ್ಧ ಪ್ರತಿಭಟನೆ

7
ಶಾಸಕ ದೊಡ್ಡನಗೌಡ ನೇತೃತ್ವದಲ್ಲಿ ಎಸ್‌ಪಿ ಕಚೇರಿಗೆ ಬಂದು ದೂರು ಸಲ್ಲಿಕೆ

ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ಆರೋಪ: ಇಳಕಲ್ ಪಿಎಸ್‌ಐ ವಿರುದ್ಧ ಪ್ರತಿಭಟನೆ

Published:
Updated:
Deccan Herald

ಬಾಗಲಕೋಟೆ: ಸಬ್‌ಇನ್‌ಸ್ಪೆಕ್ಟರ್ ನಾಗರಾಜ ಬಿಲಾರಿ ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ಇಳಕಲ್ ನಿವಾಸಿಗಳು ಸೋಮವಾರ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇಲ್ಲಿನ ಎಸ್.ಪಿ ಕಚೇರಿಗೆ ಬಂದ ಇಳಕಲ್ ನಿವಾಸಿಗಳು ಪಿ.ಎಸ್.ಐ ನಾಗರಾಜ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ರಜೆಯಲ್ಲಿದ್ದ ಕಾರಣ ಡಿವೈಎಸ್‌ಪಿ ಎಸ್.ಬಿ.ಗಿರೀಶ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಸಮಾಧಾನಪಡಿಸಿದರು.

’ಪಿ.ಎಸ್.ಐ ನಾಗರಾಜ ಬಿಲಾರಿ ಭಾನುವಾರ ಇಳಕಲ್ ನಿವಾಸಿ ಶಿವರಾಜ ಎಂಬುವವರ ಮೇಲೆ ಸುಖಾಸುಮ್ಮನೆ ಹಲ್ಲೆ ಮಾಡಿ, ಸಾರ್ವಜನಿಕವಾಗಿ ಅಪಮಾನಿಸಿದ್ದಾರೆ’ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅಧಿಕಾರದ ದರ್ಪದಿಂದ ಅವರು ಆ ರೀತಿ ವರ್ತಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

’ಸಣ್ಣ ಸಣ್ಣ ಕಾರಣಕ್ಕೂ ಸಾರ್ವಜನಿಕರ ಜೊತೆ ಪಿಎಸ್‌ಐ ದುರ್ವರ್ತನೆ ತೋರುತ್ತಾರೆ. ಬೀದಿ ಬದಿಯ ವ್ಯಾಪಾರಸ್ಥರಿಗೆ ತೊಂದರೆ ಕೊಡುತ್ತಿದ್ದಾರೆ.  ಸಾರ್ವಜನಿಕವಾಗಿ ಥಳಿಸುವುದು ಮಾಡುತ್ತಾರೆ. ಈ ಬಗ್ಗೆ ಹಲವು ಬಾರಿ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಇಳಕಲ್‌ ನಗರದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಬಸವರಾಜ ಬಳಗೇರಿ, ಸಿ.ವಿ.ಜೇವರಗಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !