ವರ್ಗಾವಣೆಯಲ್ಲಿ ದಂಧೆ ನಡೆದಿಲ್ಲ: ಎಚ್.ಡಿ.ರೇವಣ್ಣ

7

ವರ್ಗಾವಣೆಯಲ್ಲಿ ದಂಧೆ ನಡೆದಿಲ್ಲ: ಎಚ್.ಡಿ.ರೇವಣ್ಣ

Published:
Updated:
Deccan Herald

ಹಾಸನ: ‘ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಯಾವುದೇ ದಂಧೆ ನಡೆದಿಲ್ಲ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಲ್ಲಿ ಸೋಮವಾರ ಸ್ಪಷ್ಟನೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಇಲಾಖೆಯಲ್ಲಿ ನಡೆದಿರುವ 700ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆಯಲ್ಲಿ ನನ್ನ ಪಾತ್ರವಿಲ್ಲ. ಖಾಲಿ ಇರುವ ಜಾಗ ಭರ್ತಿ ಮಾಡಲಾಗಿದೆ. ತೆರವಾಗಿರುವ ಜಾಗ ತುಂಬದಿದ್ದರೆ ಕೆಲಸ ಹೇಗೆ ನಡೆಯಲು ಸಾಧ್ಯ’ ಎಂದರು.

‘ಎಲ್ಲ ಇಲಾಖೆಗಳಿಗೂ ಕೆಲವು ಎಂಜಿನಿಯರ್‌ಗಳನ್ನು ವರ್ಗಾವಣೆ ಮಾಡಿದ್ದೇನೆ. ಈ ಬಗ್ಗೆ ಯಾರಿಗೆ ಬೇಕಾದರೂ ದಾಖಲೆ ನೀಡಲು ಸಿದ್ಧನಿದ್ದೇನೆ. ಬೇಕಾದರೆ ಪರಿಶೀಲಿಸಲಿ’ ಎಂದು ಗುಡುಗಿದರು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !