ಜೆ.ಎನ್.ಯು ನಕ್ಸಲರ ಕೇಂದ್ರ: ಅರುಣಕುಮಾರ

7

ಜೆ.ಎನ್.ಯು ನಕ್ಸಲರ ಕೇಂದ್ರ: ಅರುಣಕುಮಾರ

Published:
Updated:
Deccan Herald

ಬಾಗಲಕೋಟೆ: ದೇಶದಲ್ಲಿ ನಕ್ಸಲ್ ಮತ್ತು ಮಾವೋವಾದಿಗಳ ಪ್ರಮುಖ ಕೇಂದ್ರ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಅದರ ಬಾಹುಗಳು ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳಲ್ಲೂ ಹರಡಿಕೊಂಡಿವೆ’ ಎಂದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ ಹೇಳಿದರು.

ಇಲ್ಲಿನ ಬಿ.ವಿ.ವಿ ಸಂಘದ ಆರ್.ಡಿ.ಎಫ್ ಸಭಾಭವನದಲ್ಲಿ ಸಮಕಾಲಿನ ವೈಚಾರಿಕ ವೇದಿಕೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 'ಮಾಯಾವಿ ನಾಡ ನಕ್ಸಲರು ರಾಷ್ಟ್ರಕ್ಕೆ ಕಂಟಕ' ಎಂಬ ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಈ ಮಾವೋವಾದಿಗಳು ವಿದ್ಯಾರ್ಥಿಗಳನ್ನು ಸಂಘಟಿಸಿ ಅವರನ್ನು ದೇಶದ ವಿರುದ್ಧ, ಇಲ್ಲಿನ ಕಾನೂನು ವ್ಯವಸ್ಥೆ, ಕಾರ್ಯಾಂಗ ವ್ಯವಸ್ಥೆ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ’ ಎಂದರು.

‘ವಿದೇಶದಿಂದ ಅಕ್ರಮವಾಗಿ ಶಸ್ತ್ರಾಸ್ತ್ರ ಸೇರಿದಂತೆ ಅಗತ್ಯ ವಸ್ತುಗಳು ಮಾವೋದಿಗಳಿಗೆ ಪೂರೈಕೆಯಾಗುತ್ತಿತ್ತು. ಅದಕ್ಕೀಗ ಕೇಂದ್ರ ಸರ್ಕಾರ ಸರ್ಕಾರ ಕಡಿವಾಣ ಹಾಕಿದೆ ಎಂದ ಅವರು, ದೇಶದಲ್ಲಿರುವ ಅನೇಕ ಭಿನ್ನ ವಿಚಾರಗಳನ್ನು ದೊಡ್ಡದಾಗಿ ಸ್ಫೋಟ ಮಾಡುವಂತಹ ಕೆಲಸ ಇಂದಿನ ಬುದ್ಧಿ ಜೀವಿಗಳು ಎನಿಸಿಕೊಂಡವರು ಮಾಡುತ್ತಿದ್ದಾರೆ. ಇಂತವರ ರಕ್ಷಣೆಗೆ ರಾಜಕಾರಣಿಗಳು ನಿಂತಿರುವುದು ಬೇಸರದ ಸಂಗತಿ’ ಎಂದರು.

‘ಜಗತ್ತಿನಾದಾದ್ಯಂತ ಸದ್ಯ ಐದು ರಾಷ್ಟ್ರಗಳಲ್ಲಿ ಮಾತ್ರ ಕಮ್ಯುನಿಸಂ ಉಳಿದುಕೊಂಡಿದೆ. ಅಲ್ಲಿ ಕೇವಲ ಅಧಿಕಾರಕ್ಕೆ ಮಹತ್ವವಿದೆ ಹೊರತು ಮಾನವೀಯ ಮೌಲ್ಯಗಳಿಗೆ ಮಹತ್ವವಿಲ್ಲ. ಡಾ.ಅಂಬೇಡ್ಕರ್ ಕೂಡಾ ಅವರನ್ನು ಒಪ್ಪಿರಲಿಲ್ಲ. ಅಲ್ಲಿನ ಸಮಾನತೆ ಕೇವಲ ಘೋಷಣೆಗೆ ಮಾತ್ರ ಸೀಮಿತ’ ಎಂದರು.

ಈ ಸಂದರ್ಭದಲ್ಲಿ ಮೋಹನ ದೇಶಪಾಂಡೆ, ಸುಭಾಷ್ ತಿಪ್ಪಣ್ಣವರ, ಶ್ರೀನಿವಾಸ ಬೆಮ್ಮಲಗಿ, ವೆಂಕಟೇಶ ಸಂಗಮ, ರಾಮಚಂದ್ರ ದೇಶಪಾಂಡೆ, ಗುರು ಹಿರೇಮಠ, ಎಂ.ಬಿ.ಹೂಗಾರ, ಎಸ್.ಜಿ.ಕೋಟಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !