ಬ್ಯಾಡ್ಮಿಂಟನ್‌: ಎಸ್‌ಡಿಎಂ, ರಾಮಯ್ಯ ಕಾಲೇಜು ಚಾಂಪಿಯನ್‌

7

ಬ್ಯಾಡ್ಮಿಂಟನ್‌: ಎಸ್‌ಡಿಎಂ, ರಾಮಯ್ಯ ಕಾಲೇಜು ಚಾಂಪಿಯನ್‌

Published:
Updated:
Deccan Herald

ಜಮಖಂಡಿ: ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜು ಹಾಗೂ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾನೂನು ಕಾಲೇಜು ತಂಡಗಳು ಇಲ್ಲಿ ನಡೆದ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ ಮಹಾವಿದ್ಯಾಲಯಗಳ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿವೆ.

ಶುಕ್ರವಾರ ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಎಸ್‌ಡಿಎಂ ತಂಡ 3–2ರಲ್ಲಿ ಬೆಂಗಳೂರಿನ ಕೆಎಲ್‌ಇ ಕಾನೂನು ಕಾಲೇಜು ಎದುರು ಜಯ ಸಾಧಿಸಿತು.

ಮಹಿಳಾ ವಿಭಾಗದಲ್ಲಿ ರಾಮಯ್ಯ ಕಾಲೇಜು 2–1ರಲ್ಲಿ ಉಡುಪಿಯ ವಿ.ಬಿ. ಕಾನೂನು ಕಾಲೇಜು ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್‌ ಆಯಿತು. ರಾಮಯ್ಯ ಕಾಲೇಜು ಕಳೆದ ವರ್ಷ ಮೂರನೇ ಸ್ಥಾನ ಪಡೆದಿತ್ತು.

ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯ ಪುರುಷರ ವಿಭಾಗದಲ್ಲಿ ಬೆಂಗಳೂರಿನ ರಾಮಯ್ಯ ಕಾಲೇಜು ತಂಡ 3–2ರಲ್ಲಿ  ಬೆಂಗಳೂರಿನ ಬಿ.ಎಂ.ಎಸ್ ಕಾಲೇಜು ತಂಡದ ಮೇಲೂ, ಮಹಿಳಾ ವಿಭಾಗದಲ್ಲಿ ಹುಬ್ಬಳ್ಳಿಯ ಕೆಎಸ್‌ಎಲ್‌ಯು ತಂಡ 2–0ರಲ್ಲಿ ಮಂಗಳೂರಿನ ಜೆಎಸ್‌ಎಸ್ ಕಾಲೇಜು ತಂಡದ ವಿರುದ್ಧವೂ ಜಯ ಸಾಧಿಸಿದವು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !