ವಿದ್ಯಾಭೂಷಣರಿಗೆ ‘ಸಂಸ್ಕೃತಿ ಸಂಗಮ’ ಪ್ರಶಸ್ತಿ ಪ್ರದಾನ

7

ವಿದ್ಯಾಭೂಷಣರಿಗೆ ‘ಸಂಸ್ಕೃತಿ ಸಂಗಮ’ ಪ್ರಶಸ್ತಿ ಪ್ರದಾನ

Published:
Updated:
Deccan Herald

ಬೆಂಗಳೂರು: ವಚನ ಸಾಹಿತ್ಯ ಕ್ಷೇತ್ರದಲ್ಲಿ ಡಾ.ವೀರಣ್ಣ ರಾಜೂರ, ಹರಿದಾಸ ಸಾಹಿತ್ಯದಲ್ಲಿ ಡಾ.ವಿದ್ಯಾಭೂಷಣರು, ಹಿಂದೂಸ್ಥಾನಿ ಗಾಯಕರಾದ ಡಾ.ಎಂ.ವೆಂಕಟೇಶ್‌ಕುಮಾರ್‌, ಜಾನಪದ ಸಾಹಿತ್ಯಕ್ಕೆ ಡಾ.ಪಿ.ಕೆ.ರಾಜಶೇಖರ್‌ ಅವರಿಗೆ ‘ಸಂಸ್ಕೃತಿ ಸಂಗಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ.ಸಿ.ಸೋಮಶೇಖರ–ಶ್ರೀಮತಿ ಎನ್‌.ಸರ್ವಮಂಗಳ, ಸಾಹಿತ್ಯ ಸೇವಾ ಪ್ರತಿಷ್ಠಾನ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ  ಚಂದ್ರಶೇಖರ ಕಂಬಾರ ಹಾಗೂ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು ಪ್ರಶಸ್ತಿ ನೀಡಿದರು. ಪ್ರಶಸ್ತಿ ಮೊತ್ತ ₹10 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ.

ಪಿ.ಕೆ.ರಾಜಶೇಖರ್‌, ‘ನಾನು ಜಾನಪದವನ್ನು ವಿಶ್ವವಿದ್ಯಾಲಯದಲ್ಲಿ ಕಲಿಯಲಿಲ್ಲ. ನಮ್ಮೂರಿನ ಪರಿಸರ ನನಗೆ ಎಲ್ಲವನ್ನೂ ಕಲಿಸಿತು. ಆ ನಂತರ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡೆ. 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದೇನೆ. ಇನ್ನೂ 20 ಪುಸ್ತಕ ಬರೆಯುವ ಆಸೆ ಇದೆ. ಅಲ್ಲಿಯವರೆಗೂ ನಾನು ಬದುಕಿರಬೇಕು’ ಎಂದರು.

‘ಮೊದಲ ಬಾರಿ ನನ್ನನ್ನು ಒಂದು ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಇಬ್ಬರಿಗೆ ಪ್ರಶಸ್ತಿ ಮೊತ್ತವನ್ನು ಹಂಚಿದ್ದರು. ನನ್ನೊಂದಿಗೆ ಪ್ರಶಸ್ತಿ ಪಡೆಯುವ ಇನ್ನೊಬ್ಬ ವ್ಯಕ್ತಿ ತುಂಬಾ ಶ್ರೀಮಂತರಾಗಿದ್ದರು. ಅದಕ್ಕೆ ನಾನು ಆಯೋಜಕರಿಗೆ, ಹಣವನ್ನು ನನಗೆ ಕೊಡಿ, ಪ್ರಶಸ್ತಿಯನ್ನು ಅವರಿಗೆ ಕೊಡಿ ಎಂದು ಬಾಯಿಬಿಟ್ಟು ಹೇಳಿಯೇ ಬಿಟ್ಟೆ.. ನನ್ನ ಮನೆಯಲ್ಲಿ ಕಲಿಯುತ್ತಿರುವ ಶಿಷ್ಯರಿಗೆ ಪುಸ್ತಕ, ಬಟ್ಟೆಗಾದರೂ ಸಹಾಯ ಆಗಲಿ ಎಂದು ಹೇಳಿದೆ. ಆ ನಂತರ ಒಬ್ಬರು ಸ್ವಾಮೀಜಿ ನನ್ನನ್ನು ಮನೆಯ ತನಕ ಹುಡುಕಿಕೊಂಡು ಬಂದರು. ಪ್ರಶಸ್ತಿಗಿಂತ ಹೆಚ್ಚಿನ ಹಣವನ್ನೇ ನನ್ನ ಕೈಗೆ ಕೊಟ್ಟು ಹೋದರು. ಆ ಮಹಾತ್ಮ ಈ ವೇದಿಕೆಯಲ್ಲೇ ಇದ್ದಾರೆ’ ಎಂದು ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳನ್ನು ತೋರಿಸಿ ಹೇಳಿದರು.

ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ‘ಮಕ್ಕಳನ್ನು, ಶ್ರೀಮಂತರಾಗಿ, ಅಧಿಕಾರಿಗಳಾಗಿ ಎಂದು ಹುರಿದುಂಬಿಸುವವರೇ ಹೆಚ್ಚು. ಆದರೆ ಸಂಸ್ಕೃತಿಯನ್ನು ಉಳಿಸಿಕೊಳ್ಳುವಂತೆ ಮಾನವೀಯತೆಯ ನೆಲೆಯಲ್ಲಿ ಬೆಳೆಸುವುದಿಲ್ಲ. ಅವರು ದೊಡ್ಡವರಾದ ಮೇಲೆ ತಂದೆ, ತಾಯಿಯರೊಂದಿಗೆ ಇರಲು ಇಷ್ಟಪಡುವುದಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !