ಮಲಿನವಾಗುತ್ತಿದೆ ಜನರ ಮನಸ್ಸು: ಟಿಮ್ ಬಾಯ್ಡ್‌

7

ಮಲಿನವಾಗುತ್ತಿದೆ ಜನರ ಮನಸ್ಸು: ಟಿಮ್ ಬಾಯ್ಡ್‌

Published:
Updated:
Deccan Herald

ಬೆಂಗಳೂರು: ‘ನಾವು ಸಂತಸವಾಗಿರಬೇಕು. ನಮ್ಮವರು ಸಂತಸವಾಗಿರಬೇಕು ಎಂದು ಬಹುತೇಕರು ತಪ್ಪುದಾರಿಯನ್ನು ಆಯ್ದಕೊಳ್ಳುತ್ತಿದ್ದಾರೆ. ಇದರಿಂದಾಗಿ ಜನರ ಮನಸ್ಸು ಮಲಿನವಾಗುತ್ತಿದೆ’ ಎಂದು ಥಿಯಸಾಫಿಕಲ್‌ ಸೊಸೈಟಿಯ ಅಧ್ಯಕ್ಷ ಟಿಮ್‌ ಬಾಯ್ಡ್‌ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಥಿಯಸಾಫಿಕಲ್‌ ಫೆಡರೇಷನ್‌ನ 109ನೇ ವಾರ್ಷಿಕ ಸಮ್ಮೇಳನ ಹಾಗೂ ಸೊಸೈಟಿಯ ಶತಮಾನೋತ್ಸವ ಭವನ ಉದ್ಘಾಟಿಸಿ ಅವರು ಮಾತನಾಡಿದರು.

‘12 ವರ್ಷಗಳಲ್ಲಿ ಪ್ರಪಂಚದ ಬೇರೆ–ಬೇರೆ ದೇಶಗಳಲ್ಲಿ 60ಕ್ಕೂ ಹೆಚ್ಚು ಯುದ್ಧಗಳು ನಡೆದಿವೆ. ಇದರಿಂದ ಆರ್ಥಿಕ ಅಸಮತೋಲನ ಸೃಷ್ಟಿಯಾಗುತ್ತಿದೆ. ಪಾರಿಸರಿಕ ಹಾನಿಯಾಗಿದೆ’ ಎಂದರು.

‘ಕೊಳ್ಳುಬಾಕುತನ ಮತ್ತು ಮೌಢ್ಯತೆಗಳಿಂದಾಗಿ ನಾವೆಲ್ಲ ವಿನಾಶದೆಡೆಗೆ ಹೋಗುತ್ತಿದ್ದೇವೆ. ಇವೆರಡರ ಹೊರತಾದ ಮೂರನೇ ದಾರಿಯನ್ನು ನಾವು ಕೊಂಡುಕೊಳ್ಳಬೇಕಿದೆ. ಅದಕ್ಕಾಗಿ ಹಿಂದಿನ ಮತ್ತು ಇಂದಿನ ಮಹಾತ್ಮರು ಹೇಳಿದ ಒಳಿತಿನ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

‘ಅಮೆರಿಕಾದ ಮೂಲ ನಿವಾಸಿಗಳ ಜನಪದದಲ್ಲಿ ಒಂದು ಮಾತಿದೆ. ಅದೆಂದರೆ ‘ಯಾವುದೇ ಮರದ ಕೊಂಬೆಯು, ಇನ್ನೊಂದು ಕೊಂಬೆಯ ಬೆಳವಣಿಗೆಗೆ ಅಡ್ಡಿಯಾಗದಂತೆ ಬೆಳೆಯುತ್ತದೆ. ಹಾಗಾಗಿಯೇ ಮರ ಎತ್ತರೆತ್ತರಕ್ಕೆ ಬೆಳೆಯುತ್ತದೆ’. ಹಾಗೆಯೇ ಮನುಷ್ಯನಾದವನು ಇನ್ನೊಬ್ಬರೊಂದಿಗೆ ಸಂಘರ್ಷಕ್ಕೆ ಇಳಿಯದೆ ಬದುಕಬೇಕು. ಆಗ ಎಲ್ಲರ ಉನ್ನತಿಯೂ ಆಗುತ್ತದೆ’ ಎಂದರು.

ಶತಮಾನೋತ್ಸವ ಭವನವು 60X30 ಅಡಿ ಜಾಗದಲ್ಲಿ ಕಟ್ಟಿದ ಸಭಾಂಗಣ ಹೊಂದಿದೆ. ‘ಪ್ರತಿ ಸೋಮವಾರ ಮತ್ತು ಗುರುವಾರದಂದು ಇಲ್ಲಿ ಅಧ್ಯಾತ್ಮಿಕ ಉಪನ್ಯಾಸಗಳು ನಡೆಯಲಿವೆ’ ಎಂದು ಫೆಡರೇಷನ್‌ ಅಧ್ಯಕ್ಷ ಬಿ.ವಿ.ತಿಪ್ಪೇಸ್ವಾಮಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !