₹ 90,000 ಪರಿಹಾರಕ್ಕೆ ‘ಸುಪ್ರೀಂ’ ಸೂಚನೆ

7
ಚಿನ್ನದ ಗಣಿಗಾಗಿ 249 ಎಕರೆ ಭೂಸ್ವಾಧೀನ

₹ 90,000 ಪರಿಹಾರಕ್ಕೆ ‘ಸುಪ್ರೀಂ’ ಸೂಚನೆ

Published:
Updated:

ನವದೆಹಲಿ: ಚಿನ್ನದ ಗಣಿಗಾರಿಕೆಗಾಗಿ ಸ್ವಾಧೀನಪಡಿಸಿಕೊಳ್ಳಲಾದ ಭೂಮಿಯ ಮಾಲೀಕರಿಗೆ ಪ್ರತಿ ಎಕರೆಗೆ ₹ 90,000 ಪರಿಹಾರ ನೀಡುವಂತೆ ರಾಜ್ಯ ಸರ್ಕಾರಿ ಒಡೆತನದ ಹಟ್ಟಿ ಗೋಲ್ಡ್ ಮೈನ್ಸ್ ಕಂಪೆನಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಪ್ರತಿ ಎಕರೆಗೆ ₹ 25,000 ಪರಿಹಾರ ನೀಡಲು ಸೂಚಿಸಿ ಕರ್ನಾಟಕ ಹೈಕೋರ್ಟ್‌ 2012ರ ಜೂನ್‌ 19ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭೂಮಾಲೀಕ ಮಾರೆಪ್ಪ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ಕಳೆದ ವಾರ ಈ ಆದೇಶ ಹೊರಡಿಸಿದೆ.

‘ಪ್ರತಿ ಎಕರೆಗೆ ₹ 90,000 ಪರಿಹಾರ ಹಾಗೂ ಎಲ್ಲ ರೀತಿಯ ಕಾನೂನುಬದ್ಧ ಪ್ರಯೋಜನ ಪಡೆಯಲು ಭೂಮಾಲೀಕರು ಅರ್ಹರು’ ಎಂದು 2016ರಲ್ಲಿ ಸಿದ್ದಣ್ಣ ಎಂಬುವವರು ಸಲ್ಲಿಸಿದ್ದ ಸಿವಿಲ್‌ ಅರ್ಜಿ ಆಧರಿಸಿ ನೀಡಲಾಗಿದ್ದ ಆದೇಶವನ್ನು ಆಧರಿಸಿ ನ್ಯಾಯಪೀಠ ಈ ಆದೇಶ ನೀಡಿದೆ.

ಈ ಸಂಬಂಧ ಹಟ್ಟಿ ಗೋಲ್ಡ್‌ ಮೈನ್ಸ್‌ ಕಂಪೆನಿಗೆ ಯಾವುದೇ ನೋಟಿಸ್‌ ಜಾರಿ ಮಾಡದ ನ್ಯಾಯಪೀಠ, ಪರಿಹಾರ ನೀಡುವಂತೆ ಸೂಚಿಸಿದೆ.

ಚಿನ್ನದ ನಿಕ್ಷೇಪ ಒಳಗೊಂಡಿರುವ ಒಟ್ಟು 249 ಎಕರೆ 10 ಗುಂಟೆ ಜಮೀನನ್ನು ಗಣಿಗಾರಿಕೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಪ್ರತಿ ಎಕರೆಗೆ ₹ 1 ಲಕ್ಷ ಪರಿಹಾರ ನೀಡುವಂತೆ ಭೂ-ಮಾಲೀಕರು ಮನವಿ ಮಾಡಿದ್ದರಾದರೂ, ಚಿನ್ನ ಹಾಗೂ ಅದರ ಬೆಲೆಯ ಆಧಾರದ ಮೇಲೆ ಭೂಮಿಯ ಮೌಲ್ಯಮಾಪನ ಮಾಡುವುದು ಸೂಕ್ತ ವಿಧಾನವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !