‘ಎಚ್‌ಎಎಲ್‌ಗೆ ಕೈತುಂಬಾ ಕೆಲಸ’

7

‘ಎಚ್‌ಎಎಲ್‌ಗೆ ಕೈತುಂಬಾ ಕೆಲಸ’

Published:
Updated:

ಬೆಂಗಳೂರು: ‘ಕೇಂದ್ರ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ. (ಎಚ್‌ಎಎಲ್‌) ಮುಂದಿನ ನಾಲ್ಕು ವರ್ಷಕ್ಕೆ ₹ 64,000 ಕೋಟಿ ಮೌಲ್ಯದ ವಿಮಾನ ಹಾಗೂ ಎಂಜಿನ್‌ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿದೆ’ ಎಂದು ಸಂಸ್ಥೆಯ ನೂತನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ  (ಸಿಎಂಡಿ) ಆರ್‌. ಮಾಧವನ್‌ ತಿಳಿಸಿದರು.

ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮಗೆ ಕೆಲಸ ಕಡಿಮೆಯೇನಿಲ್ಲ. ಮಾಡುವುದಕ್ಕೆ ಬೇಕಾದಷ್ಟು ಕೆಲಸವಿದೆ. ಸಂಸ್ಥೆಗೆ ಕೆಲಸ ಕಡಿಮೆ ಆಗುತ್ತಿದೆ’ ಎಂಬುದು ಉತ್ಪ್ರೇಕ್ಷೆಯ ಮಾತು ಎಂದರು.

‘ರಫೇಲ್‌ ಗುತ್ತಿಗೆಯನ್ನು ರಿಲಯನ್ಸ್‌ಗೆ ನೀಡಿದ್ದರಿಂದ, ಈಗಿರುವ ಕೆಲಸ ಮುಗಿದ ಬಳಿಕ ಎಚ್‌ಎಎಲ್‌ ತೊಂದರೆಗೆ ಸಿಲುಕುವುದೇ’ ಎಂಬ ಪ್ರಶ್ನೆಗೆ ಮಾಧವನ್‌, ‘ನಮ್ಮ ಲಘು ಯುದ್ಧ ವಿಮಾನ (ಎಲ್‌ಸಿಎಚ್‌) ತಯಾರಿಕೆ 2021ರಿಂದ ಆರಂಭವಾಗಲಿದ್ದು, ಈ ವಿಮಾನ ಪೂರೈಕೆಗೂ ಅವಕಾಶವಿದೆ’ ಎಂದರು.

ಇದರೊಟ್ಟಿಗೆ, ₹ 7,000 ಕೋಟಿಯ ಸುಖೋಯ್‌– 30 ಎಂಜಿನ್‌ಗಳ ಪೂರೈಕೆ ಮಾಡಲಿದ್ದೇವೆ. ಇದು ನಮ್ಮ ಪ್ರತಿವರ್ಷದ ಮಾರಾಟಕ್ಕೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ. ಭಾರತೀಯ ವಾಯುಪಡೆಗೆ ಇದು ಬೆಂಬಲವಾಗಿ ನಿಲ್ಲಲಿದೆ. ನಾಸಿಕ್‌ನ ಎಚ್‌ಎಎಲ್‌ ಸುಖೋಯ್‌ ಕಾಂಪ್ಲೆಕ್ಸ್‌ನಲ್ಲಿ ಇವುಗಳನ್ನು ತಯಾರಿಸಲಾಗುತ್ತಿದ್ದು, ಮುಂದಿನ 17 ತಿಂಗಳಲ್ಲಿ ಯೋಜನೆ ಮುಕ್ತಾಯಗೊಳ್ಳಲಿದೆ ಎಂದು ಅವರು ವಿವರಿಸಿದರು.

‘ಸುಖೋಯ್‌ ಎಂಜಿನ್‌ ತಯಾರಿಕೆ ಮುಗಿದ ತಕ್ಷಣ ನಾಸಿಕ್‌ನ ಕಾಂಪ್ಲೆಕ್ಸ್‌ ಮುಚ್ಚುವುದಿಲ್ಲ. ಈಗ ವರ್ಷಕ್ಕೆ ಎಂಟು ಲಘು ಯುದ್ಧ ವಿಮಾನ ತಯಾರಿಸಲಾಗುತ್ತಿದೆ. ಇದನ್ನು 16ಕ್ಕೆ, ಆನಂತರ 20ಕ್ಕೆ ಏರಿಸುವ ಉದ್ದೇಶವಿದೆ. 83 ಎಲ್‌ಸಿಎಗಳ ಪೂರೈಕೆಗೆ ನಮಗೆ ಬೇಡಿಕೆ ಬಂದಿದೆ. ಈ ವಿಭಾಗದಲ್ಲಿ ನಾವು ₹ 1,300 ಕೋಟಿ ಹೂಡಿಕೆ ಮಾಡ ಲಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !