ಎಂ.ಜೆ ಅಕ್ಬರ್ ಹೇಳಿಕೆಗೆ ಪಲ್ಲವಿ ತಿರುಗೇಟು

7

ಎಂ.ಜೆ ಅಕ್ಬರ್ ಹೇಳಿಕೆಗೆ ಪಲ್ಲವಿ ತಿರುಗೇಟು

Published:
Updated:
Deccan Herald

ವಾಷಿಂಗ್ಟನ್ : ಮಾಜಿ ಸಚಿವ ಮತ್ತು ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ ಅವರ ‘ನಮ್ಮಿಬ್ಬರದು ಸಹಮತದ ಸಂಬಂಧ’ ಎನ್ನುವ ಹೇಳಿಕೆಗೆ ಅಮೆರಿಕದ ಪತ್ರಕರ್ತೆ ಪಲ್ಲವಿ ಗೊಗೊಯಿ ಶನಿವಾರ ತಿರುಗೇಟು ನೀಡಿದ್ದಾರೆ. 

‘ಅಧಿಕಾರ ದುರುಪಯೋಗಪಡಿಸಿಕೊಂಡು ಸಾಧಿಸಿದ ಸಂಬಂಧ ಸಹಮತದ್ದಲ್ಲ’ ಎಂದು ಅವರು ಹೇಳಿದ್ದಾರೆ.  

ತಮ್ಮ ಮೇಲೆ ಅಕ್ಬರ್ ಅತ್ಯಾಚಾರ ಎಸಗಿದ್ದಾರೆ ಎನ್ನುವ ಪಲ್ಲವಿ ಆರೋಪಕ್ಕೆ, ‘ಕೆಲವು ತಿಂಗಳ ಕಾಲ ನಾವು ಸಹಮತದ ಸಂಬಂಧ ಹೊಂದಿದ್ದೆವು’ ಎಂದು ಅಕ್ಬರ್ ಶುಕ್ರವಾರ ಹೇಳಿಕೆ ನೀಡಿದ್ದರು. 

‘ದಿ ವಾಷಿಂಗ್ಟನ್ ಪೋಸ್ಟ್‌’ನಲ್ಲಿ ಪ್ರಕಟವಾಗಿರುವ ನನ್ನ ಲೇಖನದ ಪ್ರತಿ ಪದಕ್ಕೂ ಬದ್ಧಳಾಗಿದ್ದೇನೆ ಎಂದು ಪಲ್ಲವಿ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

‘ನಾನು ಸತ್ಯ ಬಹಿರಂಗಪಡಿಸುತ್ತೇನೆ. ಅಕ್ಬರ್ ಅವರಿಂದ ಶೋಷಣೆಗೆ ಒಳಗಾದ ಇತರೆ ಮಹಿಳೆಯರು ಸಹ ಆಗ ತಮ್ಮ ಪಾಲಿನ ಸತ್ಯ ಹೊರಹಾಕುತ್ತಾರೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !