ಕಚ್ಚಿಸಿಕೊಂಡವರು ನೇರವಾಗಿ ಹೇಳಲಿ: ಕೆ.ಎಚ್.ಮುನಿಯಪ್ಪ

7

ಕಚ್ಚಿಸಿಕೊಂಡವರು ನೇರವಾಗಿ ಹೇಳಲಿ: ಕೆ.ಎಚ್.ಮುನಿಯಪ್ಪ

Published:
Updated:

ಕೋಲಾರ: ‘ಚೇಳು, ತಿಂಗಣೆಗಳಿಂದ ಕಚ್ಚಿಸಿಕೊಂಡವರು ನೇರವಾಗಿ ಹೇಳಲಿ, ಚರ್ಚಿಸಿ ಅಗಿರುವ ಗಾಯ ವಾಸಿ ಮಾಡುವ ಪ್ರಯತ್ನ ಮಾಡೊಣ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಭಾನುವಾರ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಸಿ ಸುದ್ದಿಗಾರರೊಮದಿಗೆ ಮಾತನಾಡಿ, ‘ಯಾರೂ ನನ್ನ ಹೆಸರು ಹೇಳಿಕೊಂಡು ಮಾತಾಡಿಲ್ಲ. ಅವರು ನನ್ನ ಹೆಸರು ಹೇಳಿ ಮಾತಾಡಲಿ ಆಗ ಅದಕ್ಕೆ ಉತ್ತರಿಸುತ್ತೇನೆ’ ಎಂದರು.

‘ನಾನು 7 ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಪ್ರತಿಭಾರಿಯೂ ಇದೇ ರೀತಿಯ ಹಗ್ಗ ಜಗ್ಗಾಟ ನಡೆದಿದೆ, ನನ್ನ ವಿರುದ್ಧ ಹೋರಾಟ ಮಾಡಿದವರು ಚುನಾವಣೆ ವೇಳೆ ನನ್ನ ಜತೆ ನಿಂತು ಗೆಲ್ಲಿಸಿದ್ದಾರೆ. ಈ ಬಾರಿಯೂ ಅದೇ ರೀತಿ ಮುಂದುವರೆಯುತ್ತದೆ’ ಎಂದು ಹೇಳಿದರು.

ಅಭಿನಂದನಾ ಸಮಾರಂಭಕ್ಕೆ ನಿಮಗೆ ಯಾಕೆ ಆಹ್ವಾನ ನೀಡಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ‘ದಲಿತ ಸಂಘಟನೆ ಕಾರ್ಯಕ್ರಮ ಆಯೋಜನೆ ಮಾಡಿತ್ತು, ತಮಗೆ ಬೇಕಾದವರನ್ನು ಕರೆಸಿಕೊಳ್ಳುತ್ತಾರೆ, ಅದು ಅವರಿಗೆ ಬಿಟ್ಟ ವಿಚಾರ’ ಎಂದರು.

‘ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಳೆದ ಚುನಾವಣೆಯಲ್ಲಿ ಅವರಿಗೆ ಬೆಂಬಲ ನೀಡಿದ್ದೇನೆ. ಇಬ್ಬರೂ ಒಟ್ಟಿಗೆ ಇದ್ದೇವೆ ಕಳೆದ ಬಾರಿ ಅವರನ್ನು ಶಿಡ್ಲಘಟ್ಟದಲ್ಲಿ ಗೆಲ್ಲಿಸಿದ್ದಾರೆ. ಯಾವುದೇ ರೀತಿಯಲ್ಲಿ ಅನಾನುಕೂಲ ಆಗಿಲ್ಲ ಇನ್ನು ಒಳ್ಳೆಯದೇ ಆಗಿದೆ’ ಎಂದು ಷ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !