ಸಂತಾಪಕ್ಕೆ ಸೀಮಿತ

7

ಸಂತಾಪಕ್ಕೆ ಸೀಮಿತ

Published:
Updated:

ಬೆಳಗಾವಿ: ವಿಧಾನಮಂಡಲ ಅಧಿವೇಶನದ ಮೊದಲ ದಿನದ ಕಲಾಪವು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವುದಕ್ಕಷ್ಟೇ ಸೀಮಿತಗೊಂಡಿತು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಕೇಂದ್ರದ ಮಾಜಿ ಸಚಿವರಾದ ಎಚ್‌.ಎನ್‌. ಅನಂತ್‌ ಕುಮಾರ್‌, ಸಿ.ಕೆ. ಜಾಫರ್‌ ಷರೀಫ್‌, ರಾಜ್ಯದ ಮಾಜಿ ಸಚಿವ ಎಂ.ಎಚ್‌. ಅಂಬರೀಷ್‌, ಸಚಿವರಾದ ತಿಪ್ಪೇಸ್ವಾಮಿ, ಈಟಿ ಶಂಭುನಾಥ, ವಿಮಲಾಬಾಯಿ ದೇಶ್‌ಮುಖ್‌, ಓಂಪ್ರಕಾಶ್‌ ಕಣಗಲಿ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ, ಉಭಯ ಸದನಗಳಲ್ಲೂ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಪರಿಷತ್ತಿನ ಕಲಾಪಗಳು ಮಂಗಳವಾರ ಬೆಳಿಗ್ಗೆ 10ಕ್ಕೆ ಹಾಗೂ ವಿಧಾನಸಭೆಯ ಕಲಾಪಗಳು 11ಕ್ಕೆ ಆರಂಭವಾಗಲಿವೆ.

ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಕಲಾ‍ಪ ಮುಂದೂಡುವುದು ಸರಿಯೇ ಎಂಬ ವಿಚಾರ ಪರಿಷತ್ತಿನಲ್ಲಿ ಕೆಲಹೊತ್ತು ಚರ್ಚೆಗೆ ಗ್ರಾಸವಾಯಿತು.

ಕಲಾಪವನ್ನು ಮುಂದೂಡಬೇಕು ಎಂದು ವಿರೋಧ ಪಕ್ಷದ ನಾಯಕ ಒತ್ತಾಯಿಸಿದರು. ಈ ಕುರಿತು ಕೆಲ ಹೊತ್ತಿನ ಚರ್ಚೆ ಬಳಿಕ ಸಭಾಪತಿಯವರು ಕಲಾಪವನ್ನು ಮಂಗಳವಾರ ಬೆಳಿಗ್ಗೆ 10ಕ್ಕೆ ಮುಂದೂಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !