‘ದೇವರ ಕೃಪೆಗೆ ಅಚಲ ವಿಶ್ವಾಸ, ನಂಬಿಕೆ ಅವಶ್ಯ’

7

‘ದೇವರ ಕೃಪೆಗೆ ಅಚಲ ವಿಶ್ವಾಸ, ನಂಬಿಕೆ ಅವಶ್ಯ’

Published:
Updated:
Deccan Herald

ಬಾದಾಮಿ: ‘ದೇವರ ಕೃಪೆಗೆ ಪಾತ್ರವಾಗಲು ನಂಬಿಕೆ ಮತ್ತು ವಿಶ್ವಾಸ ಮುಖ್ಯವಾಗಿರುತ್ತದೆ. ನಂಬಿಕೆಯ ಸಂಕಲ್ಪ ಮಾಡಲು ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳು ಅಡಿಪಾಯವಾಗಿವೆ. ಪ್ರತಿಯೊಬ್ಬರು ಅವುಗಳಲ್ಲಿ ಪಾಲ್ಗೊಳ್ಳಬೇಕು ‘ ಎಂದು ಉಡುಪಿ ಕಾಣಿಯೂರ ಮಠದ ವಿದ್ಯಾವಲ್ಲಭ ತೀರ್ಥ ಶ್ರೀಗಳು ಹೇಳಿದರು.

ಇಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಜರುಗಿದ ನೂತನ ಗೋಪುರದ ಉದ್ಘಾಟನೆ, ಕಳಸಾರೋಹಣ ಮತ್ತು ಶ್ರೀನಿವಾಸದೇವರ ಹಾಗೂ ಪದ್ಮಾವತಿ ಕಲ್ಯಾಣ ಮಹೋತ್ಸವ ಸಮಾರಂಭ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ಕಂಡುಕೊಳ್ಳಲು ಧಾರ್ಮಿಕ ಮತ್ತು ಆಧ್ಯಾತ್ಮ ಕಾರ್ಯಗಳನ್ನು ನಿಸ್ವಾರ್ಥ ಸೇವೆಯಿಂದ ಮಾಡಬೇಕು. ಆಗ ಮಾತ್ರ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ. ದಾರ್ಶನಿಕರು , ಸಂತರು, ವೈಭವದ ಬದುಕನ್ನು ಕಳೆಯಲಿಲ್ಲ. ಸುಖ, ಶಾಂತಿ ನೆಮ್ಮದಿಯ ಬದುಕನ್ನು ಕಂಡುಕೊಳ್ಳಲು ಎಲ್ಲವನ್ನು ತೊರೆದು ವೈರಾಗ್ಯ ತಾಳಿ ದೇವರ ಒಲುಮೆಗೆ ಪಾತ್ರರಾದರು’ ಎಂದು ಹೇಳಿದರು.

ವಿ.ಕೆ. ಧಾರವಾಡಕರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿ, ರಾಜಶೇಖರ ಶೀಲವಂತರ, ವೀರಪುಲಿಕೇಶಿ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಎ.ಸಿ. ಪಟ್ಟಣದ, ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಕುಮಾರಗೌಡ ಜನಾಲಿ, ಪುರಸಭೆ ಮಾಜಿ ಅಧ್ಯಕ್ಷ ಆರ್.ಎಫ್. ಬಾಗವಾನ, ಎಫ್.ಎ. ದೊಡಮನಿ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಸ್.ಟಿ. ಪಾಟೀಲ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಮೀಲ್ ನಾಯಕ, ಪುಲಿಕೇಶಿ ಬೋಂಬ್ಲೆ ಇದ್ದರು.

ಗಣಪತಿಭಟ್, ರಾಮಭಟ್ ಜೋಶಿ, ಚಿದಂಬರ ಸೂಡಿ, ಎಸ್.ಜಿ. ಕುಲಕರ್ಣಿ, ಅನಂತಾಚಾರ್ಯ ಗುಡಿ, ಎಸ್.ಪಿ. ರಾವ್, ಆರ್.ಕೆ. ದೇಶಪಾಂಡೆ, ಕೆ.ವಿ. ಕೆರೂರ, ಪ್ರಹ್ಲಾದ್ ಇನಾಂದಾರ, ಪಿ.ಪಿ. ಕಾರಕೂನ, ನರಸಿಂಹಾಚಾರ್ಯ ಗುಡಿ, ಜಯತೀರ್ಥ ಇನಾಂದಾರ, ಮಹೇಶ ಪೂಜಾರ ಇದ್ದರು. ಡಾ. ವಿ.ವೈ ಭಾಗವತ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !