ನ್ಯೂಯಾರ್ಕ್: ಪತ್ನಿ ಹಾಗೂ ತನ್ನ ಮೂವರು ಸಂಬಂಧಿಕರನ್ನು ಗುಂಡಿಟ್ಟು ಹತ್ಯೆ ಮಾಡಿದ ಭಾರತ ಮೂಲದ 51 ವರ್ಷ ವಿಜಯ್ ಕುಮಾರ್ ಅವರನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಾರ್ಜಿಯಾ ರಾಜ್ಯದ ಗ್ವನೆಟ್ ಕೌಂಟಿ ಎಂಬಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮನೆಯಿಂದ ಸ್ವಲ್ಪ ದೂರದಲ್ಲಿಯೇ ವಿಜಯ್ ಅವರನ್ನು ಬಂಧಿಸಲಾಗಿದೆ. ಪ್ರಕರಣದ ಬಗ್ಗೆ ಅಲ್ಲಿನ ಪೊಲೀಸರು ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ವಿಜಯ್ ಅವರ ಪತ್ನಿ ಮೀಮು ದೋಗ್ರಾ (43), ಗೌರವ್ ಕುಮಾರ್ (33), ನಿಧಿ ಚಂದರ್ (37) ಮತ್ತು ಹರೀಶ್ ಚಂದರ್ (38) ಹತ್ಯೆಯಾದವರು. ಈ ಬಗ್ಗೆ ಅಟ್ಲಾಂಟದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ದುಃಖದಲ್ಲಿರುವ ಕುಟುಂಬಕ್ಕೆ ಬೇಕಾದ ಎಲ್ಲ ಸಹಕಾರ ನೀಡುವುದಾಗಿ ಹೇಳಿದ್ದಾರೆ.

ಘಟನೆ ಏನು?: ವಿಜಯ್ ಮತ್ತು ಮೀಮು ಅಟ್ಲಾಂಟಾದಲ್ಲಿ ನೆಲಸಿದ್ದಾರೆ. ಯಾವುದೋ ವಿಚಾರಕ್ಕೆ ಮನೆಯಲ್ಲಿ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ತಮ್ಮ 12 ವರ್ಷದ ಮಗುವನ್ನು ಕರೆದುಕೊಂಡು, ಜಾರ್ಜಿಯಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ.

ಗೌರವ್, ನಿಧಿ ಮತ್ತು ಹರೀಶ್ ಅವರು ಏಳು ಮತ್ತು 10 ವರ್ಷದ ಇಬ್ಬರು ಮಕ್ಕಳೊಂದಿಗೆ ಜಾರ್ಜಿಯಾದ ಬ್ರೂಕ್ ಐವಿ ಕೌಂಟಿ ಎಂಬಲ್ಲಿ ವಾಸವಿದ್ದರು. ಈ ಮನೆಯಲ್ಲಿಯೇ ವಿಜಯ್ ಅವರು ಗುಂಡಿಕ್ಕಿ ನಾಲ್ವರನ್ನು ಹತ್ಯೆ ಮಾಡಿದ್ದಾರೆ. ಪೊಲೀಸರು ಬಂದ ವೇಳೆ ನಾಲ್ವರ ಶವಗಳು ನೆಲದ ಮೇಲೆ ಬಿದ್ದುಕೊಂಡಿದ್ದವು.

911ಕ್ಕೆ ಕರೆ ಮಾಡಿದ್ದ ಬಾಲಕ

ಅಪರಾಧ ಕೃತ್ಯದ ಕುರಿತು ಕರೆ ಬಂದ ಬಳಿಕ ಪೊಲೀಸರು ಮನೆಗೆ ಧಾವಿಸಿದಾಗ 7, 9 ಮತ್ತು 12 ವರ್ಷದ ಮೂವರು ಮಕ್ಕಳು ಮನೆಯಲ್ಲಿ ಅಡಗಿ ಕುಳಿತಿದ್ದರು. ನಾಲ್ವರ ಮೃತದೇಹಗಳು ಪತ್ತೆಯಾಗಿದ್ದವು. ಅಲ್ಲಿದ್ದ 12 ವರ್ಷದ ಬಾಲಕ ಪೊಲೀಸರಿಗೆ ಕರೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೌಟುಂಬಿಕ ಸಂಬಂಧಿತ ಗಲಭೆ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಯಾವುದೇ ಹೆಸರನ್ನು ಉಲ್ಲೇಖಿಸದ ಪೊಲೀಸರು, ಶಂಕಿತನು ಅಪರಾಧದ ಸ್ಥಳದಿಂದ ಸಮೀಪದಲ್ಲೇ ಇದ್ದನು. ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ದಂಪತಿ ನಡುವೆ ವಾಗ್ವಾದವು ಎಷ್ಟು ಹೊತ್ತಿಗೆ ಆರಂಭವಾಯಿತು ಎಂಬುದು ತಿಳಿದಿಲ್ಲ. ಅವರು ಇಲ್ಲಿಗೆ ಏಕೆ ಬಂದರು, ಗುಂಡಿಕ್ಕುವಂಥ ಘಟನೆ ಏನು ನಡೆದಿತ್ತು ಎಂದೂ ತಿಳಿದಿಲ್ಲ.
-ಗ್ವನೆಟ್ ಕೌಂಟಿ ನಗರದ ಪೊಲೀಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.