ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ

7

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ

Published:
Updated:

ಕೋಲಾರ: ‘ಜಿಲ್ಲೆಯಲ್ಲಿ ಭಗೀರಥ ಬೋವಿ ಸಮಾಜವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ’ ಎಂದು ಬೋವಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್‌ಕುಮಾರ್ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬೋವಿ ಸಮಾಜದ ಏಳಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಲ್ಲದೇ, ಕಾಂಗ್ರೆಸ್‌ ಪಕ್ಷವು ಮೀಸಲಾತಿ ಆಧಾರದಲ್ಲಿ ನನ್ನ ತಂದೆಯನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಿಸಿತ್ತು’ ಎಂದರು.

‘ಜಿಲ್ಲೆಯಲ್ಲಿ ಬೋವಿ ಸಮಾಜದ ಚಟುವಟಿಕೆಗಳನ್ನು ಮಾಡಲು ಜಾಗವಿಲ್ಲದಿದ್ದಾಗ ಸಂಸದ ಕೆ.ಎಚ್‌.ಮುನಿಯಪ್ಪ ಅವರು ಮುತುವರ್ಜಿ ವಹಿಸಿ ಸಮುದಾಯ ಭವನ ನಿರ್ಮಾಣಕ್ಕೆ ನಗರದ ಹೊರವಲಯದ ಟಮಕದಲ್ಲಿ ಸರ್ಕಾರದಿಂದ 20 ಗುಂಟೆ ಜಾಗ ಮಂಜೂರು ಮಾಡಿಸಿದರು’ ಎಂದು ಸ್ಮರಿಸಿದರು.

‘ಬಂಡೆ ಹೊಡೆಯುವುದು ನಮ್ಮ ಸಮಾಜದ ಮೂಲ ಕಸುಬು. ಆದರೆ, ಜಿಲ್ಲಾಡಳಿತವು ಸಾಕಷ್ಟು ಕಡೆ ಬಂಡೆ ಹೊಡೆಯುವುದಕ್ಕೆ ಅನುಮತಿ ನಿರಾಕರಿಸಿದ ಸಂದರ್ಭದಲ್ಲಿ ಮುನಿಯಪ್ಪ ಅವರು ಜಿಲ್ಲಾಧಿಕಾರಿ ಬಳಿ ಚರ್ಚಿಸಿ ಕೆಲವು ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟರು. ಬೀದಿ ಪಾಲಾಗಿದ್ದ ಸಮುದಾಯದ ಕುಟುಂಬಗಳನ್ನು ಕಾಂಗ್ರೆಸ್ ಪಕ್ಷ ರಕ್ಷಿಸಿದೆ’ ಎಂದು ಹೇಳಿದರು.

‘ಲೋಕಸಭಾ ಚುನಾವಣೆಯಲ್ಲಿ ಸಮುದಾಯವು ಮುನಿಯಪ್ಪ ಅವರನ್ನು ಬೆಂಬಲಿಸಲಿದೆ. ಅವರು ಸತತ 8ನೇ ಬಾರಿಗೆ ಸಂಸದರಾಗುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮುನಿರಾಜು, ಪ್ರಧಾನ ಕಾರ್ಯದರ್ಶಿ ಮುನಯ್ಯ, ನಗರ ಘಟಕದ ಅಧ್ಯಕ್ಷ ರಮೇಶ್, ಸಿದ್ದರಾಮೇಶ್ವರ ಬೋವಿ ಸಂಘದ ಅಧ್ಯಕ್ಷ ಎಸ್.ನಾರಾಯಣ, ಕಾರ್ಯದರ್ಶಿ ಅನಿಲ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !