ಶ್ರೀಲಂಕಾ ತಂಡಕ್ಕೆ ಮಾಲಿಂಗ ನಾಯಕತ್ವ

7

ಶ್ರೀಲಂಕಾ ತಂಡಕ್ಕೆ ಮಾಲಿಂಗ ನಾಯಕತ್ವ

Published:
Updated:
Deccan Herald

ಕೊಲಂಬೊ: ಶ್ರೀಲಂಕಾದ ನಿಗದಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ಹಿರಿಯ ಆಟಗಾರ ಲಸಿತ್ ಮಾಲಿಂಗ ಅವರು ನಾಯಕರಾಗಿ ಮರಳಿದ್ದಾರೆ.

35 ವರ್ಷದ ಮಾಲಿಂಗ ಅವರು ಏಕದಿನ ಮತ್ತು ಟ್ವಿಂಟಿ–20 ಕ್ರಿಕೆಟ್ ತಂಡದ ನಾಯಕತ್ವ  ವಹಿಸುವರು. ಬಲಗೈ ವೇಗಿ ಮಾಲಿಂಗ ಅವರು ಜನೆವರಿ 3ರಿಂದ ನ್ಯೂಜಿಲೆಂಡ್ ಎದುರು ನಡೆಯಲಿರುವ ಸರಣಿಯಲ್ಲಿ ತಂಡವನ್ನು ಮುನ್ನಡೆಸುವರು. ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯು ಶುಕ್ರವಾರ 17  ಆಟಗಾರರ ತಂಡವನ್ನು ಪ್ರಕಟಿಸಿದೆ. ಹೋದ ಅಕ್ಟೋಬರ್‌ನಲ್ಲಿ ಅವರು ಇಂಗ್ಲೆಂಡ್  ಎದುರಿನ ಪಂದ್ಯದಲ್ಲಿ ಆಡಿದ್ದರು. ನಂತರ ಅವರು ಆಡಿರಲಿಲ್ಲ.

ತಂಡ ಇಂತಿದೆ: ಲಸಿತ್ ಮಾಲಿಂಗ (ನಾಯಕ), ನಿರೋಷನ್ ಡಿಕ್ವೆಲ್ಲಾ (ಉಪನಾಯಕ), ಏಂಜೆಲೊ ಮ್ಯಾಥ್ಯೂಸ್, ಧನುಷ್ಕಾ ಗುಣತಿಲಕ, ಕುಶಾಲ ಜೆನಿತ್ ಪೆರೆರಾ, ದಿನೇಶ್ ಚಾಂಡಿಮಲ್, ಅಸೆಲಾ ಗುಣರತ್ನೆ, ಕುಶಾಲ ಮೆಂಡಿಸ್, ಧನಜಂಯ ಡಿಸಿಲ್ವಾ, ತಿಸಾರ ಪೆರೆರಾ,  ದಸುನ್ ಶನಾಕ, ಲಕ್ಷನ ಸಂಡಕನ್, ಸಿಕ್ಕುಗೆ ಪ್ರಸನ್ನ, ದುಷ್ಮಂತಾ ಚಾಮೀರಾ, ಕಸುನ್ ರಜಿತಾ, ನುವಾನ ಪ್ರದೀಪ, ಲಾಹಿರು ಕುಮಾರ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !