ಅಕ್ರಮ ಕಲ್ಲು ಗಣಿಗಾರಿಕೆ: ಆರೋಪ

7

ಅಕ್ರಮ ಕಲ್ಲು ಗಣಿಗಾರಿಕೆ: ಆರೋಪ

Published:
Updated:
Deccan Herald

ದಾಬಸ್‌ಪೇಟೆ: ‘ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಕೇನಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಎಂಎಸ್ ಫಾಸ್ಟ್ ವೆಲ್ ಡೀಲ್ ಕಂಪನಿಯು ಅಕ್ರಮವಾಗಿ ಕಲ್ಲು ಗಣಿಕಾರಿಕೆ ನಡೆಸುತ್ತಿದೆ’ ಎಂದು ಪಂಚಾಯಿತಿಯ ಸದಸ್ಯರು ಆರೋಪಿಸಿದ್ದಾರೆ.

‘ಕಂಪನಿಯು ನಿರಾಕ್ಷೇಪಣಾ ಪತ್ರ (ಎನ್.ಓ.ಸಿ)ಕ್ಕೆ ಅರ್ಜಿ ಸಲ್ಲಿಸಿದೆ. ಇಲ್ಲಿ ಕಲ್ಲು ಗಣಿಗಾರಿಕೆ ನಡೆಸಿದರೆ ಮಾಕೇನಹಳ್ಳಿ ಗ್ರಾಮದ ಜನರಿಗೆ ತೊಂದರೆಯಾಗುವುದು ಮನಗಂಡು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದೇವೆ. ಸ್ಥಳೀಯ ಆಡಳಿತವಾದ ಪಂಚಾಯಿತಿ ಅನುಮತಿ ಪಡೆಯದೆ, ಕಂಪನಿ ಮೂರು ತಿಂಗಳಿಂದ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸುತ್ತಿದೆ’ ಎಂದು ದೂರಿದರು ಸದಸ್ಯ ರಾಮಾಂಜನೇಯ.

‘ಸರ್ವೇನಂ. 47/48ರಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ, ಸ್ಥಳೀಯರಿಗೆ ತೊಂದರೆಯಾಗಿರುವ ದೂರಿನ ಹಿನ್ನಲೆಯಲ್ಲಿ ಪರಿಶೀಲನೆಗೆ ಸದಸ್ಯರು ಹೋದಾಗ, ಇಲ್ಲಿನ ಸಿಬ್ಬಂದಿ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಆರೋಪಿಸಿದರು’ ಸದಸ್ಯ ಸಿ.ಮಹೇಶ್.
ನೆಲಮಂಗಲ ಯೋಜನಾ ಪ್ರಾಧಿಕಾರವೇ ಅಕ್ರಮ ಗಣಿಗಾರಿಕೆ ತಡೆ ಹಿಡಿಯುವಂತೆ ಪಂಚಾಯಿತಿಗೆ ಪತ್ರ ಬರೆದಿತ್ತು. ಆದರೆ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪಾಧಿಕಾರದ ಪತ್ರದಂತೆ ನಾವು ಕಲ್ಲು ಗಣಿಗಾರಿಕೆ ನಿಲ್ಲಿಸಿ ಎಂದು ಅಕ್ಟೋಬರ್‌ 27ರಂದು ಕಂಪನಿಯವರಿಗೆ ತಿಳಿವಳಿಕೆ ಪತ್ರ ನೀಡಿದ್ದೇವೆ ಎಂದು ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ’ ಎಂದು ದೂರಿದರು ಉಪಾಧ್ಯಕ್ಷೆ ಕಾಂತಮ್ಮ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾರ್ವತಿ ಪ್ರತಿಕ್ರಿಯಿಸಿ, ‘ಕಂಪನಿ ಎನ್ಓಸಿಗಾಗಿ ಅರ್ಜಿ ಸಲ್ಲಿಸಿದೆ. ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಅನುಮತಿ ನೀಡಿಲ್ಲ. ಗಣಿಗಾರಿಕೆ ನಿಲ್ಲಿಸಲು ಕಂಪನಿಗೆ ನೋಟಿಸ್ ನೀಡಿದ್ದೇವೆ. ನಾವು ಕೈಗೊಂಡ ಕ್ರಮದ ಬಗ್ಗೆ ಯೋಜನಾ ಪ್ರಾಧಿಕಾರಕ್ಕೂ ತಿಳಿಸಿದ್ದೇವೆ’ ಎಂದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !