ಎಸ್.ಆರ್.ಪಾಟೀಲರಿಗೆ ಆದ ಅನ್ಯಾಯ ಸರಿಪಡಿಸಿ: ಹೈಕಮಾಂಡ್‌ಗೆ ಒತ್ತಾಯ

7
ಜಿಲ್ಲಾ ಕಾಂಗ್ರೆಸ್ ಘಟಕದಿಂದ ಹೈಕಮಾಂಡ್‌ಗೆ ಒತ್ತಾಯ

ಎಸ್.ಆರ್.ಪಾಟೀಲರಿಗೆ ಆದ ಅನ್ಯಾಯ ಸರಿಪಡಿಸಿ: ಹೈಕಮಾಂಡ್‌ಗೆ ಒತ್ತಾಯ

Published:
Updated:

ಬಾಗಲಕೋಟೆ: ‘ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕ ಎಸ್.ಆರ್.ಪಾಟೀಲರಿಗೆ ಸಭಾಪತಿ ಸ್ಥಾನ ತಪ್ಪಿಸಿ ಅಪಮಾನ ಮಾಡಲಾಗಿದೆ. ಅವರಿಗೆ ಸಚಿವ ಸ್ಥಾನ ನೀಡಿ ಆಗಿರುವ ತಪ್ಪು ಸರಿಪಡಿಸುವಂತೆ’ ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ ಹೈಕಮಾಂಡ್‌ಗೆ ಒತ್ತಾಯಿಸಿದರು.

‘ಎಸ್.ಆರ್.ಪಾಟೀಲರಿಗೆ ಸಭಾಪತಿ ಸ್ಥಾನ ತಪ್ಪಿಸಿರುವ ಹಿಂದೆ ಷಡ್ಯಂತ್ರ ನಡೆದಿದೆ. ಆ ಸ್ಥಾನದಲ್ಲಿ ಬಸವರಾಜ ಹೊರಟ್ಟಿ ಅವರನ್ನೇ ಮುಂದುವರೆಸಬಹುದಿತ್ತು. ಉತ್ತರ ಕರ್ನಾಟಕದವರು ಭಾವನಾ ಜೀವಿಗಳು ಹಾಗಾಗಿ ಈ ಅನ್ಯಾಯ ಸ್ವಾತಂತ್ರ್ಯ ಸಿಕ್ಕಂದಿನಿಂದಲೂ ನಡೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗನ್ನು ಕಾಂಗ್ರೆಸ್ ಪಕ್ಷದಿಂದ ಖಂಡಿಸಿದ್ದೆವು. ಆದರೆ ಈಗ ಅದಕ್ಕೆ ಪುಷ್ಠಿ ಕೊಡುವ ರೀತಿ ಈ ಭಾಗದ ನಾಯಕರನ್ನು ನಡೆಸಿಕೊಳ್ಳಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ನಮ್ಮ ಕಾರ್ಯಕರ್ತರೂ ಅದಕ್ಕೆ ದನಿಗೂಡಿಸಲಿದ್ದಾರೆ’ ಎಂದು ಹೇಳಿದರು.

‘ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ 41 ಮಂದಿ ಶಾಸಕರು ಆಯ್ಕೆಯಾಗಿದ್ದರೂ ಬರೀ ಐದು ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ದಕ್ಷಿಣ ಕರ್ನಾಟಕ ಭಾಗದಲ್ಲಿ 9 ಮಂದಿಗೆ ನೀಡಲಾಗಿದೆ. ಮುಂದಿನ ಸಂಪುಟ ವಿಸ್ತರಣೆ ವೇಳೆಯಲ್ಲಾದರೂ ಈ ಅನ್ಯಾಯ ಸರಿಪಡಿಸಿ’ ಎಂದು ಆಗ್ರಹಿಸಿದರು.

’ಬರೀ ಮಾತಿನಲ್ಲಿ ಮಾತ್ರ ಪ್ರಾತಿನಿಧ್ಯ ಸಲ್ಲ.ಕೃತಿಯಲ್ಲೂ ಈ ಭಾಗಕ್ಕೆ ಅವಕಾಶ ನೀಡಿ’ ಎಂದು ಮುಖಂಡ ನಾರಾಯಣ ದೇಸಾಯಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಾ.ದಡ್ಡೇನವರ, ನಿಂಗನಗೌಡ ಪಾಟೀಲ, ಮುತ್ತು ಜೋಳದ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !