ಹಿರಿಯ ನಟ ಖಾದರ್‌ ಖಾನ್‌ ನಿಧನ

7

ಹಿರಿಯ ನಟ ಖಾದರ್‌ ಖಾನ್‌ ನಿಧನ

Published:
Updated:
Prajavani

ಮುಂಬೈ: ಹಿರಿಯ ನಟ ಖಾದರ್‌ ಖಾನ್‌ (81) ಅವರು ಮಂಗಳವಾರ (ಭಾರತೀಯ ಕಾಲಮಾನ ಪ್ರಕಾರ) ನಿಧನರಾದರು. ಅವರು ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು.

‘ನನ್ನ ತಂದೆ ನಮ್ಮನ್ನಗಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆನಡಾದ ಸಮಯದ ಪ್ರಕಾರ ಡಿಸೆಂಬರ್ 31ರಂದು ಸಂಜೆ 6 ಗಂಟೆಗೆ ಅವರು ನಿಧನರಾಗಿದ್ದಾರೆ. ಮಧ್ಯಾಹ್ನ ನಂತರ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ಕಳೆದ 16–17 ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆನಡಾದಲ್ಲೇ ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಖಾದರ್ ಖಾನ್ ಮಗ ಸರ್ಫರಾಜ್‌ ತಿಳಿಸಿದ್ದಾರೆ. ಉಸಿರಾಟ ಸಂಬಂಧಿತ ಸಮಸ್ಯೆಯಿಂದ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಖಾದರ್‌ ಖಾನ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಭಾನುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಖಾದರ್‌, 1973ರಲ್ಲಿ ರಾಜೇಶ್‌ ಖನ್ನಾ ಅವರ ‘ಡಾಗ್‌’ ಚಿತ್ರದೊಂದಿಗೆ ನಟನಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ನಟನೆ ಆರಂಭಿಸುವ ಮೊದಲು ಸಂಭಾಷಣಾಕಾರರಾಗಿ ಗುರುತಿಸಿಕೊಂಡಿದ್ದ ಅವರು 250ಕ್ಕೂ ಹಚ್ಚು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ‘ಜವಾನಿ ದಿವಾನಿ’ ಇವರು ಸಂಭಾಷಣೆ ಬರೆದ ಮೊದಲ ಚಿತ್ರ.

Tags: 

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 5

  Sad
 • 0

  Frustrated
 • 0

  Angry

Comments:

0 comments

Write the first review for this !