ಡಾ.ಮಂಜುನಾಥ್‌ಗೆ ‘ವಿಶ್ವ ಮಾನವ ಪ್ರಶಸ್ತಿ’

7

ಡಾ.ಮಂಜುನಾಥ್‌ಗೆ ‘ವಿಶ್ವ ಮಾನವ ಪ್ರಶಸ್ತಿ’

Published:
Updated:
Prajavani

ಬೆಂಗಳೂರು: ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ಕರ್ನಾಟಕ ವಿಶ್ವ ಮಾನವ ಸಂಸ್ಥೆಯು ಇಲ್ಲಿನ ಪಿಇಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ಕುವೆಂಪು ವಿಚಾರಧಾರೆ’ ಸಮಾರಂಭದಲ್ಲಿ ‘ವಿಶ್ವ ಮಾನವ ಪ್ರಶಸ್ತಿ’ ‌ನೀಡಿ ಗೌರವಿಸಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಮಂಜುನಾಥ್‌, ‘ದೇಶದ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ದುಪ್ಪಟ್ಟಾಗಿದ್ದು, ಅದು ಹೀಗೇ ಮುಂದುವರಿದರೆ ಮುಂದಿನ ಹತ್ತು ವರ್ಷಗಳಲ್ಲಿ ಪ್ರಪಂಚದಲ್ಲೇ ಹೆಚ್ಚು ಮಧುಮೇಹಿಗಳು ಮತ್ತು ಹೃದ್ರೋಗಿ
ಗಳು ಹೊಂದುವ ದೇಶ ಆಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ವಾಯುಮಾಲಿನ್ಯಕ್ಕೆ ನಿಯಂತ್ರಣ ಹಾಕದಿದ್ದರೆ ಮುಂದಿನ ಪೀಳಿಗೆ ಆಕ್ಸಿಜನ್ ಸಿಲಿಂಡರ್‌ಗಳ ಮೂಲಕ ಉಸಿರಾಡು
ವಂತ ಪರಿಸ್ಥಿತಿ ಎದುರಾಗುತ್ತದೆ. ಒತ್ತಡ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಶೇ 50ರಷ್ಟು ಜನರು ಜೀವನಶೈಲಿ ಆಧಾರಿತ ಕಾಯಿಲೆಗೆ ತುತ್ತಾಗುತ್ತಿದ್ದಾರೆ’ ಎಂದರು.

‘ಕುವೆಂಪು ಅವರ ಹೆಸರಲ್ಲಿ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ದೇಶಕ್ಕೆ ಬೇಕಿರುವುದು ಕುವೆಂಪು ಅವರಂಥ ವಿಶ್ವ ಮಾನವರು, ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರಲ್ಲ’ ಎಂದು ತಿಳಿಸಿದರು.

ಪ್ರಶಸ್ತಿಯ ಮೊತ್ತವನ್ನು (₹25 ಸಾವಿರ) ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವಂತೆ ಡಾ.ಮಂಜುನಾಥ್‌ ಕೋರಿದ್ದರು. ಆ ಹಣದಲ್ಲಿ ಸರ್ಕಾರಿ ಶಾಲಾ–ಕಾಲೇಜು ಮಕ್ಕಳಿಗೆ ಕನ್ನಡ–ಇಂಗ್ಲಿಷ್‌ ನಿಘಂಟು ಮತ್ತು ಪೆನ್ನುಗಳನ್ನು ವಿತರಿಸಲಾಯಿತು. ಗಾಯಕಿ ಡಾ.ಶಮೀತಾ ಮಲ್ನಾಡ್ ಅವರು ‘ಓ ನನ್ನ ಚೇತನ’ ಗೀತೆಯನ್ನು ಹಾಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !