ಸಾವಿತ್ರಿಬಾಯಿ ಬಾಪುಲೆ ಬದುಕು ಆದರ್ಶನೀಯ

7

ಸಾವಿತ್ರಿಬಾಯಿ ಬಾಪುಲೆ ಬದುಕು ಆದರ್ಶನೀಯ

Published:
Updated:
Prajavani

ಕೋಲಾರ: ‘ಸಾವಿತ್ರಿಬಾಯಿ ಬಾಪುಲೆ ಅವರ ತತ್ವ ಆದರ್ಶಗಳನ್ನು ಮಹಿಳೆಯರು ಮೈಗೂಡಿಸಿಕೊಂಡಾಗ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಎನ್.ಮುನಿರತ್ನಯ್ಯಶೆಟ್ಟಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಸಾವಿತ್ರಿಬಾಯಿ ಬಾಪುಲೆ ಜಯಂತಿಯಲ್ಲಿ ಮಾತನಾಡಿ, ‘ಸಮಾನ ಶಿಕ್ಷಣಕ್ಕಾಗಿ ಹೋರಾಡಿದ ಸಾವಿತ್ರಿಬಾಯಿ ಬಾಪುಲೆ ಅವರ ಬದುಕು ಸಮಾಜದ ಎಲ್ಲಾ ವರ್ಗದ ಜನರಿಗೆ ಆದರ್ಶನೀಯ’ ಎಂದರು.

‘ಶಿಕ್ಷಣದಿಂದ ಸಮ ಸಮಾಜದ ನಿರ್ಮಾಣ ಮಾಡಲು ಸಾಧ್ಯ. ಸಮಾಜದ ಕಟ್ಟಡ ಕಡೆಯ ವ್ಯಕ್ತಿಗೂ ಶಿಕ್ಷಣ ದೊರೆಯಬೇಕು ಎಂಬುದು ಸಾವಿತ್ರಿಬಾಯಿ ಬಾಪುಲೆ ಅವರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಶೈಕ್ಷಣಿಕ ಪ್ರಗತಿಗೆ ಅನುಷ್ಟಾನಗೊಳಿಸಿರುವ ಸೌಕರ್ಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

ಮುಖ್ಯಶಿಕ್ಷಕ ಜಿ.ಶ್ರೀನಿವಾಸ್ ಮಾತನಾಡಿ, ‘ಹೆಣ್ಣು ಮಕ್ಕಳನ್ನು ಪೋಷಕರು ಶಿಕ್ಷಣದಿಂದ ವಂಚಿಸಬೇಡಿ’ ಎಂದು ಸಲಹೆ ನೀಡಿದರು.

‘ಹೆಣ್ಣು ಶಿಕ್ಷಣದಿಂದ ವಂಚಿತವಾದರೆ ಸಮಾಜ ಅಭಿವೃದ್ಧಿಗೆ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಗೆ ಎಷ್ಟೇ ಕಷ್ಟ ಬಂದರೂ ಕುಟುಂಬದ ನಿರ್ವಹಣೆ ಮಾಡುತ್ತಾಳೆ. ಜತೆಗೆ ಸಮ ಸಮಾಜ ನಿರ್ಮಾಣ ಮಾಡಲು ಮುಂದಾಗುತ್ತಾರೆ’ ಎಂದರು.

‘ದೇಶದಲ್ಲಿ ಶೋಷಣೆಯಿಂದ ಮಹಿಳೆಯರನ್ನು ತಪ್ಪಿಸಲು ಅನೇಕ ಮಹಿಳೆಯರು ಹೋರಾಟ ನಡೆಸಿದ್ದಾರೆ. ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಗೌರವ ನೀಡಬೇಕು’ ಎಂದು ಕೋರಿದರು.

ಸಾವಿತ್ರಿಬಾಯಿ ಬಾಪುಲೆ ಜಂತಿಯ ಅಂಗವಾಗಿ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಪ್ರಮಾಣ ಪತ್ರ ಬಹುಮಾನ ವಿತರಿಸಲಾಯಿತು.

ಶಿಕ್ಷಕರಾದ ಆರ್.ಮಂಜುಳಾ, ಪಿ.ಎಂ.ಗೋವಿಂದಪ್ಪ, ಕೃಷ್ಣಪ್ಪ, ಕೆ.ಮಮತಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !