‘ಯಡಿಯೂರಪ್ಪ ಲಿಂಗಾಯತ ವಿರೋಧಿ: ಬಸವಕುಮಾರ ಸ್ವಾಮೀಜಿ

7

‘ಯಡಿಯೂರಪ್ಪ ಲಿಂಗಾಯತ ವಿರೋಧಿ: ಬಸವಕುಮಾರ ಸ್ವಾಮೀಜಿ

Published:
Updated:

ಬೆಂಗಳೂರು: ‘ಬಿ.ಎಸ್‌.ಯಡಿಯೂರಪ್ಪ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ, ಓಟು ಕೇಳುವಾಗ ಲಿಂಗಾಯತ ಅಂತ ಹೇಳುತ್ತಾರೆ. ಆದರೂ ಧರ್ಮ ವಿರೋಧಿ ಕಾರ್ಯ ಮಾಡುತ್ತಿದ್ದಾರೆ’ ಎಂದು ಲಿಂಗಾಯತ ಧರ್ಮ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಸವಕುಮಾರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದಲ್ಲಿ ತಮ್ಮ ಪಕ್ಷವೇ ಆಡಳಿತದಲ್ಲಿದ್ದರೂ, ಪ್ರಧಾನಿಯ ಮನವೊಲಿಸಲು ಅವರು ಮುಂದಾಗಿಲ್ಲ. ಸರ್ಕಾರಿ ಸವಲತ್ತುಗಳನ್ನು ಪಡೆಯಲು ಧರ್ಮಕ್ಕೆ ಅಡ್ಡಿಪಡಿಸುತ್ತಿರುವುದು ಪಾಪದ ಕೆಲಸ’ ಎಂದು ಕಿಡಿಕಾರಿದರು.

‘ಲೋಕಸಭಾ ಚುನಾವಣೆಯು ಸಮೀಪಿಸುತ್ತಿದೆ. ಅಷ್ಟರೊಳಗೆ ಕೇಂದ್ರ ಸರ್ಕಾರವನ್ನು ಮನವೊಲಿಸಿ ಪ್ರತ್ಯೇಕ ಧರ್ಮಕ್ಕೆ ನ್ಯಾಯ ಕೊಡಿಸಲು ಯಡಿಯೂರಪ್ಪ ಮುಂದಾಗಬೇಕು. ಇಲ್ಲವಾದರೆ, ಹೋರಾಟ ಮಾಡುವುದಲ್ಲದೆ, ಮನೆ ಮನೆಗೆ ಹೋಗಿ ಬಿಜೆಪಿಗೆ ಮತ ಹಾಕಬೇಡಿ ಎಂದು ಪ್ರಚಾರ ಮಾಡುತ್ತೇವೆ’ ಎಂದು ಎಚ್ಚರಿಸಿದರು.

‘ಪಂಚ ರಾಜ್ಯ ಚುನಾವಣೆಗಳಲ್ಲಿ ಲಿಂಗಾಯತರ ಪ್ರಭಾವದಿಂದಲೇ ಸೋಲು ಕಂಡಿದ್ದಾರೆ. ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡದೆ ನಿರಾಕರಿಸಿದರೆ ಲೋಕಸಭಾ ಚುನಾವಣೆಯಲ್ಲೂ ತಕ್ಕಪಾಠ ಕಲಿಸುತ್ತೇವೆ. ಲಿಂಗಾಯತ ಧರ್ಮಕ್ಕೆ ಇತಿಹಾಸ, ಆದರ್ಶ, ಸೈದ್ಧಾಂತಿಕ ಸ್ಪಷ್ಟತೆ ಇದೆ. ಇಂಥ ಧರ್ಮಕ್ಕೆ ರಾಷ್ಟ್ರೀಯ ಮಾನ್ಯತೆ ಅಗತ್ಯ’ ಎಂದು ಎಂದು ಹೇಳಿದರು.

‘ಇದೇ 11ರಿಂದ 14ರವರೆಗೆ ಕೂಡಲಸಂಗಮದಲ್ಲಿ 32ನೇ ಶರಣ ಮೇಳ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮಠ–ಪೀಠದ ಜಂಗಮಮೂರ್ತಿಗಳು, ರಾಜಕೀಯ ಧುರೀಣರು ಪಾಲ್ಗೊಳ್ಳಲಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !