ಹಣೆಗೆ ಕುಂಕುಮವಿಟ್ಟು ₹7 ಸಾವಿರ ಕಳವು

7

ಹಣೆಗೆ ಕುಂಕುಮವಿಟ್ಟು ₹7 ಸಾವಿರ ಕಳವು

Published:
Updated:

ಬೆಂಗಳೂರು: ಹಣ್ಣಿನ ಅಂಗಡಿ ವ್ಯಾಪಾರಿ ಟಿ. ನಾಗರಾಜ್ ಎಂಬುವರ ಹಣೆಗೆ ಕುಂಕುಮವಿಟ್ಟು ಪ್ರಜ್ಞೆ ತಪ್ಪಿಸಿದ್ದ ಮೂವರು ಮಂಗಳಮುಖಿಯರು, ಅಂಗಡಿಯಲ್ಲಿದ್ದ ₹7 ಸಾವಿರ ಕದ್ದುಕೊಂಡು ಹೋಗಿದ್ದಾರೆ.

ಆ ಸಂಬಂಧ ನಾಗರಾಜ್ ಅವರು ಕೆಂಗೇರಿ ಠಾಣೆಗೆ ದೂರು ನೀಡಿದ್ದಾರೆ. 

‘ರಾಜರಾಜೇಶ್ವರಿನಗರ ಸಮೀಪದ ಕೃಷ್ಣಾ ಗಾರ್ಡನ್‌ ನಿವಾಸಿಯಾದ ನಾಗರಾಜ್, ಶ್ರೀ ರಾಜೇಶ್ವರಿ ಹಣ್ಣಿನ ಅಂಗಡಿಯಲ್ಲಿ ಗುರುವಾರ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಅಂಗಡಿಗೆ ಬಂದಿದ್ದ ಮೂವರು ಮಂಗಳಮುಖಿಯರು, ಹಣ ಕೊಡುವಂತೆ ಕೇಳಿ ಅವರ ಹಣೆಗೆ ಕುಂಕುಮವಿಟ್ಟಿದ್ದರು’ ಎಂದು ಕೆಂಗೇರಿ ಪೊಲೀಸರು ಹೇಳಿದರು.

‘ಕುಂಕುಮವಿಡುತ್ತಿದ್ದಂತೆ ಅಂಗಡಿಯಲ್ಲೇ ನಾಗರಾಜ್, ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೆಲವು ನಿಮಿಷಗಳ ನಂತರ ಅವರಿಗೆ ಎಚ್ಚರ ಆಗಿತ್ತು. ಮಂಗಳಮುಖಿಯರೂ ಅಂಗಡಿ ಬಳಿ ಇರಲಿಲ್ಲ. ಗಲ್ಲಾ ಪೆಟ್ಟಿಗೆ ನೋಡಿದಾಗ, ₹7 ಸಾವಿರ ಕಳುವಾಗಿದ್ದು ಅವರಿಗೆ ಗೊತ್ತಾಗಿತ್ತು’ ಎಂದರು.

‘ಕಳ್ಳತನದ ಉದ್ದೇಶದಿಂದ ಅಂಗಡಿಗೆ ಬಂದಿದ್ದ ಮಂಗಳಮುಖಿಯರು, ಪ್ರಜ್ಞೆ ತಪ್ಪುವ ರಾಸಾಯನಿಕ ಪದಾರ್ಥವೊಂದನ್ನು ಕುಂಕುಮದಲ್ಲೇ ಮಿಶ್ರಣ ಮಾಡಿಕೊಂಡು ಬಂದಿದ್ದರು. ಅದನ್ನು ಹಣೆಗೆ ಇಡುತ್ತಿದ್ದಂತೆಯೇ ವಾಸನೆಯಿಂದ ಪ್ರಜ್ಞೆ ತಪ್ಪಿ ಬಿದ್ದಿರುವುದಾಗಿ ನಾಗರಾಜ್ ಹೇಳಿದ್ದಾರೆ. ಮಂಗಳಮುಖಿಯರ ಪತ್ತೆಗಾಗಿ ಅಂಗಡಿ ಹಾಗೂ ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

  • 7

    Happy
  • 7

    Amused
  • 1

    Sad
  • 1

    Frustrated
  • 11

    Angry

Comments:

0 comments

Write the first review for this !