ಬಸವಣ್ಣ ಒಳ್ಳೆಯ ಹಿಂದೂ: ಪೇಜಾವರ ಶ್ರೀ

7

ಬಸವಣ್ಣ ಒಳ್ಳೆಯ ಹಿಂದೂ: ಪೇಜಾವರ ಶ್ರೀ

Published:
Updated:

ಬಾಗಲಕೋಟೆ: ‘ಶಿವಭಕ್ತಿಯನ್ನು ಪ್ರಚಾರ ಮಾಡಿದ ಬಸವಣ್ಣ ಒಬ್ಬ ದೊಡ್ಡ ಹಾಗೂ ಒಳ್ಳೆಯ ಹಿಂದೂ ಆಗಿದ್ದಾರೆ. ಹಾಗಾಗಿ  ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಾದ ರಾಜ್ಯ ಸರ್ಕಾರದ ಶಿಫಾರಸನ್ನು ಕೇಂದ್ರ ತಿರಸ್ಕರಿಸಿರುವುದು ಸರಿಯಾಗಿಯೇ ಇದೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಗುಳೇದಗುಡ್ಡದ ಲಕ್ಷ್ಮೀ ಸಹಕಾರ ಬ್ಯಾಂಕ್‌ನ ಶತಮಾನೋತ್ಸವ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ವೀರಶೈವ ಹಾಗೂ ಲಿಂಗಾಯತ ನಡುವೆ ಬೇಧವಿಲ್ಲ. ಬಸವಣ್ಣನವರು ಹೊಸ ಮತದ ಪ್ರವರ್ತಕರಲ್ಲ. ಬದಲಿಗೆ ಅವರೇ ಸ್ವತಃ ವೀರಶೈವ ಮತ ಸ್ವೀಕರಿಸಿದ್ದರು ಎಂದರು.

'ಲಿಂಗಾಯತರು ಹಿಂದೂಗಳೇ ಅಲ್ಲ ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ. ಅವರು ಶಿವನ ಆರಾಧನೆ ಮಾಡುತ್ತಾ ಹಿಂದೂ ಸಂಪ್ರದಾಯ ಅನುಸರಿಸುತ್ತಿದ್ದಾರೆ' ಎಂದು ಹೇಳಿದರು.

ಮೇಲ್ಜಾತಿಯವರಿಗೆ ಮೀಸಲಾತಿ ನೀಡುವುದು ತಪ್ಪಲ್ಲ. ಅದನ್ನು ಎಲ್ಲ ಪಕ್ಷದವರೂ ಒಪ್ಪಿದ್ದಾರೆ. ಆ ಬಗ್ಗೆ ನಾನೇನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪ್ರತಿಯೊಬ್ಬರೂ ಚುನಾವಣೆಯಲ್ಲಿ ಗೆಲ್ಲುವುದನ್ನು ಪ್ರತಿಷ್ಠೆಯಾಗಿಟ್ಟುಕೊಂಡಿರುತ್ತಾರೆ. ಕೇಂದ್ರ ಸರ್ಕಾರ ಆ ದೃಷ್ಟಿಯಲ್ಲಿ ಮೀಸಲಾತಿ ನೀಡಿದ್ದರೂ ಅದರಲ್ಲಿ ತಪ್ಪೇನೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !