ಯುವಜನರಲ್ಲಿ ದೇಶಭಕ್ತಿಯ ಅರಿವು ಅಗತ್ಯ: ಯುವ ಬ್ರಿಗೇಡ್ ಮುಖಂಡ

7

ಯುವಜನರಲ್ಲಿ ದೇಶಭಕ್ತಿಯ ಅರಿವು ಅಗತ್ಯ: ಯುವ ಬ್ರಿಗೇಡ್ ಮುಖಂಡ

Published:
Updated:
Prajavani

ಚಿಕ್ಕಬಳ್ಳಾಪುರ: ‘ದೇಶದ ಸಂಸ್ಕೃತಿ, ಗೌರವವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಾಧಕ ವಿವೇಕಾನಂದ. ಇವರಲ್ಲಿದ್ದ ದೇಶಭಕ್ತಿ, ರಾಷ್ಟ್ರಪ್ರೇಮದ ಭಾವನೆ ಇಂದಿನ ಯುವಕರಲ್ಲಿ ಬೆಳೆಯಬೇಕಿದೆ’ ಎಂದು ಯುವ ಬ್ರಿಗೇಡ್ ಮುಖಂಡ ಸುನೀಲ್ ಹೇಳಿದರು.

ತಾಲ್ಲೂಕಿನ ಪಟ್ರೇನಹಳ್ಳಿ ನಿವಾಸಿ ಮಂಜುನಾಥ್ ಅವರ ಮನೆಯಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಮನೆಯಂಗಳದಲ್ಲಿ ನುಡಿಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಈ ದೇಶದ ಜನತೆಗೆ ಹಾಗೂ ಪ್ರಮುಖವಾಗಿ ಯುವಕರಿಗೆ ಏನಾದರೂ ಕಾಣಿಕೆ ನೀಡಬೇಕು ಎಂಬ ಹಂಬಲದಿಂದ ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸಿಯಾಗಿ ದೇಶದ ಯುವಜನರನ್ನು ಒಳ್ಳೆಯ ಮಾರ್ಗದತ್ತ ಕೊಂಡೊಯ್ಯಲು ನಿಸ್ವಾರ್ಥದಿಂದ ಜಾತಿ, ಭೇದವಿಲ್ಲದೇ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದರು. ಅವರ ಇಡೀ ಜೀವನವೇ ಇಂದಿನ ಮತ್ತು ಮುಂದಿನ ಸಮಾಜಕ್ಕೆ ಮಾದರಿಯಾಗಿದೆ’ ಎಂದು ತಿಳಿಸಿದರು.

‘ಸ್ವಾಮಿ ವಿವೇಕಾನಂದ ಅವರು ಚಿಕಾಗೋ ವಿಶ್ವಧರ್ಮ ಸಂಸತ್ತಿನಲ್ಲಿ ಉದ್ದೇಶಿಸಿ ನೀಡಿದ ಭಾಷಣ ಅನೇಕ ದೇಶ ವಾಸಿಗಳನ್ನು ಬೆರಗಾಗಿಸಿ, ಭಾರತದ ಸಂಸ್ಕೃತಿಗೆ ಮಾರುಹೋಗುವಂತೆ ಮಾಡಿದ್ದು ಹೆಮ್ಮೆಯ ಸಂಗತಿ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಹ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಂಡಿದ್ದರು’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್ ಮಾತನಾಡಿ, ‘ಯುವಜನರು ಸಮಾಜದ ಎರಡು ಕಣ್ಣುಗಳಂತೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹವರಿಗೇ ಸ್ವಾಮಿ ವಿವೇಕಾನಂದರ ಜನ್ಮದಿನ ಯಾವತ್ತು ಎಂಬು ನೆನಪಿಗೆ ಬರುತ್ತಿಲ್ಲ. ಅನೇಕ ದುಶ್ಚಟಗಳಿಗೆ ಯುವಕರು ಬಲಿಯಾಗುತ್ತಿರುವುದು ವಿಷಾದಕರ ಸಂಗತಿ’ ಎಂದು ಹೇಳಿದರು.

‘ದೇಶದ ಸಂಸ್ಕೃತಿ, ದೇಶಪ್ರೇಮ, ಪರಂಪರೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಸ್ವಾಮಿ ವಿವೇಕಾನಂದರು ಚಿಕ್ಕ ವಯಸ್ಸಿನಲ್ಲಿಯೇ ಅನೇಕ ದೇಶಗಳನ್ನು ಮತ್ತು ಭಾರತದ ಎಲ್ಲಾ ಮೂಲೆ, ಮೂಲೆಗಳನ್ನು ಸುತ್ತಿ ಯುವ ಪೀಳಿಗೆ ಒಳ್ಳೆಯ ಮಾರ್ಗದರ್ಶನ ಮಾಡಿದ್ದರು. ವಿದ್ಯಾರ್ಥಿಗಳು ಸೇರಿದಂತೆ ಯುವ ಪೀಳಿಗೆ ಅವರ ಆದರ್ಶನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶ ಹಾಗೂ ವಿಶ್ವಕ್ಕೆ ಸ್ಫೂರ್ತಿಯಾಗಬೇಕು’ ಎಂದರು.

ಕಸಾಪ ಪದಾಧಿಕಾರಿಗಳಾದ ಅಶ್ವತ್ಥ್, ಎಚ್.ಎಸ್.ಗಾರ್ಡನ್ ವಿ.ರವಿಕುಮಾರ್, ವೆಂಕಟರೋಣಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಶಿವಣ್ಣ, ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್, ಶಿಕ್ಷಕರಾದ ವಿಜಯ್ ಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !