ಉಚಿತ ಪ್ಲಾಸ್ಟಿಕ್‌ ಸರ್ಜರಿ ಶಿಬಿರ

7

ಉಚಿತ ಪ್ಲಾಸ್ಟಿಕ್‌ ಸರ್ಜರಿ ಶಿಬಿರ

Published:
Updated:
Prajavani

ಫ್ರೆಂಡ್ಸ್‌ ವೆಲ್‌ಫೇರ್‌ ಸಂಸ್ಥೆ ವತಿಯಿಂದ 25ನೇ ಉಚಿತ ಪ್ಲಾಸ್ಟಿಕ್‌ ಸರ್ಜರಿ ಶಿಬಿರವನ್ನು ನಗರದಲ್ಲಿ ಯೋಜಿಸಲಾಗಿದೆ. 

ಸೀಳು ತುಟಿ, ಸೀಳು ಮೇಲು ದವಡೆ, ಸುಟ್ಟ ಗಾಯಗಳು ಇರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಈ ಶಿಬಿರವನ್ನು ಆಯೋಜಿ
ಸಲಾಗಿದೆ.

ನುರಿತ ವೈದ್ಯರ ತಂಡ ಸರ್ಜರಿಯನ್ನು ನಡೆಸಲಿದೆ. ಫೆಬ್ರುವರಿ 3ರಂದು ಭಾನುವಾರ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಫೆಬ್ರುವರಿ 4ರಿಂದ 13ರವರೆಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. 

ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿರುವ ಬಸ್‌ಸ್ಟಾಪ್‌ ಎದುರು ವೇಗಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಿಬಿರ ನಡೆಯಲಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳು ತಮ್ಮ ಜೊತೆ ಕಡ್ಡಾಯವಾಗಿ ಕುಟುಂಬದ ಸದಸ್ಯರನ್ನು ಅಥವಾ ಸಂಬಂಧಿಕರನ್ನು ಕರೆತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ತಪಾಸಣೆ ಬೆಳಿಗ್ಗೆ 8 ಕ್ಕೆ ಆರಂಭವಾಗುತ್ತದೆ. ಹೆಚ್ಚಿನ ವಿವರಗಳಿಗೆ 91487 41707ಗೆ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !