ರಣಜಿ ಕ್ವಾರ್ಟರ್‌ಫೈನಲ್: ರಾಜಸ್ಥಾನ ವಿರುದ್ಧ ಗೌತಮ್ ಮಿಂಚು

7

ರಣಜಿ ಕ್ವಾರ್ಟರ್‌ಫೈನಲ್: ರಾಜಸ್ಥಾನ ವಿರುದ್ಧ ಗೌತಮ್ ಮಿಂಚು

Published:
Updated:
Prajavani

ಬೆಂಗಳೂರು: ಕರ್ನಾಟಕದ ಬೌಲರ್‌ಗಳು ಗುರುವಾರ ಊಟದ ವಿರಾಮದ ವೇಳೆಗೆ ರಾಜಸ್ಥಾನ ತಂಡದ ಬ್ಯಾಟ್ಸ್‌ಮನ್‌ಗಳ ಹೋರಾಟಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ರಾಜಸ್ಥಾನ ತಂಡವು 35.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 123 ರನ್ ಗಳಿಸಿದೆ.  ಕರ್ನಾಟಕದ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್  ಎರಡು, ಮಧ್ಯಮವೇಗಿಗಳಾದ ಅಭಿಮನ್ಯು ಮಿಥುನ್ ಮತ್ತು ರೋನಿತ್ ಮೋರೆ ತಲಾ ಒಂದು ವಿಕೆಟ್ ಪಡೆದರು.

ರಾಜಸ್ಥಾನ ತಂಡವು ಮೊದಲ ಇನಿಂಗ್ಸ್‌ನಲ್ಲಿ 224 ರನ್‌ ಗಳಿಸಿತ್ತು. ಬುಧವಾರ ಾರ್. ವಿನಯಕುಮಾರ್ ಮತ್ತು ರೋನಿತ್ ಮೋರೆ ಅವರು ಕೊನೆಯ ವಿಕೆಟ್‌ಗೆ 97 ರನ್‌ ಸೇರಿಸಿದರು. ಕರ್ನಾಟಕವು 39 ರನ್‌ಗಳ ಮುನ್ನಡೆ ಸಾಧಿಸಿತ್ತು. ಮೂರನೇ ದಿನ ಬೆಳಿಗ್ಗೆ ರಾಜಸ್ಥಾನದ ಆರಂಭಿಕರು ಉತ್ತಮವಾಗಿಯೇ ಅಡಿದರು. ಆತಿಥೇಯರ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.  ಆದರೆ 14ನೇ ಓವರ್‌ನಲ್ಲಿ ಮಿಥುನ್ ಎಸೆತವನ್ನು ಹೊಡೆದ  ಅಮಿತ್ ಗೌತಮ್ ಅವರು ಶ್ರೇಯಸ್ ಗೋಪಾಲ್‌ಗೆ ಕ್ಯಾಚಿತ್ತರು.

ನಂತರ ಚೇತನ್ ಬಿಷ್ಠ್ ಜೊತೆಗೂಡಿದ ನಾಯಕ ಮಹಿಪಾಲ್ ಲೊಮ್ರೊರ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 72 ರನ್ ಸೇರಿಸಿದರು.  31ನೇ ಓವರ್‌ನಲ್ಲಿ ಗೌತಮ್ ಈ ಜೊತೆಯಾಟವನ್ನು ಮುರಿದರು. ಕೆಳಮಟ್ಟದಲ್ಲಿ ತಿರುವು ಪಡೆದ ಎಸೆತವನ್ನು ಸ್ವೀಪ್‌ ಮಾಡಲು ಪ್ರಯತ್ನಿಸಿದ ಚೇತನ್ ಬ್ಯಾಟ್‌ ಅಂಚು ಸವರಿದ ಚೆಂಡು ವಿಕೆಟ್‌ಕೀಪರ್ ಶರತ್ ಕೈಸೇರಿತು. 35ನೇ ಓವರ್‌ನಲ್ಲಿ ಮಹಿಪಾಲ್ ಕೂಡ ಅದೇ ರೀತಿ ಗೌತಮ್‌ಗೆ ವಿಕೆಟ್ ಒಪ್ಪಿಸಿದರು.  ವಿರಾಮಕ್ಕೂ ಮುನ್ನದ ಎಸೆತದಲ್ಲಿ ಅಶೋಕ್ ಮನೇರಿಯಾ ಅವರ ಆಫ್‌ಸ್ಟಂಪ್ ಎಗರಿಸಿದ  ರೋನಿತ್ ಮೋರೆ ಕುಣಿದಾಡಿದರು.

ಮೊದಲ ಇನಿಂಗ್ಸ್: ರಾಜಸ್ಥಾನ 224 
ಕರ್ನಾಟಕ 263: ಎರಡನೇ ಇನಿಂಗ್ಸ್

ರಾಜಸ್ಥಾನ: 4ಕ್ಕೆ123 (35.5 ಓವರ್‌ಗಳಲ್ಲಿ)
ಅಮಿತ್ ಗೌತಮ್ ಸಿ ಶ್ರೇಯಸ್ ಗೋಪಾಲ್ ಬಿ ಅಭಿಮನ್ಯು ಮಿಥುನ್ 24
ಚೇತನ್ ಬಿಷ್ಠ್ ಸಿ ಶರತ್ ಬಿ ಗೌತಮ್ 33
ಮಹಿಪಾಲ್ ಲೊಮ್ರೊರ್ ಸಿ ಶರತ್ ಬಿ ಗೌತಮ್ 42
ರಾಬಿನ್ ಬಿಷ್ಠ್ ಬ್ಯಾಟಿಂಗ್ 06
ಅಶೋಕ ಮನೇರಿಯಾ ಬಿ ರೋನಿತ್ ಮೋರೆ 04
ಇತರೆ: 14
ವಿಕೆಟ್ ಪತನ: 1–35 (ಅಮಿತ್; 13.4), 2–107(ಚೇತನ್; 30.3), 3–118 (ಮಹಿಪಾಲ್; 34.4), 4–123 (ಅಶೋಕ್; 35.5).

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !