ಗೋಮಾಳಗಳ ಸಂರಕ್ಷಕ ಜುಂಜಪ್ಪ

7
‘ಜಾನಪದ ಮಹಾಕಾವ್ಯಗಳ ಹಿನ್ನೆಲೆಯಲ್ಲಿ ಜುಂಜಪ್ಪ’ ಉಪನ್ಯಾಸ ಕಾರ್ಯಕ್ರಮ

ಗೋಮಾಳಗಳ ಸಂರಕ್ಷಕ ಜುಂಜಪ್ಪ

Published:
Updated:
Prajavani

ಗುಬ್ಬಿ: ಸಾಂಸ್ಕೃತಿಕ ನಾಯಕ ಜುಂಜಪ್ಪ ಗೋ ಪಾಲನೆಯೊಟ್ಟಿಗೆ ಗೋಮಾಳವನ್ನು ಸಂರಕ್ಷಣೆ ಮಾಡಿ ಸಮಾಜವನ್ನು ಉನ್ನತಿ ಕಡೆಗೆ ಕೊಂಡೊಯ್ಯಲು ಸಹಕಾರಿಯಾಗಿದ್ದರು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ‘ಜಾನಪದ ಮಹಾಕಾವ್ಯಗಳ ಹಿನ್ನೆಲೆಯಲ್ಲಿ ಜುಂಜಪ್ಪ’ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.

ಮಹನೀಯರನ್ನು ಯಾವುದೇ ಸಮುದಾಯಕ್ಕೆ ಸೀಮಿತ ಮಾಡಬಾರದು. ಸಮಾಜ ಸುಧಾರಣೆ ಮಾಡಿದ ವ್ಯಕ್ತಿಯನ್ನಾಗಿ ಕಾಣಬೇಕು. ಆಗ ಸರ್ವ ಸಮಾಜವು ಉನ್ನತಿ ಕಡೆ ಹೋಗುತ್ತದೆ. ಮಕ್ಕಳು ಮೌಲ್ಯಯುತ ಶಿಕ್ಷಣದ ಮೂಲಕ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಸಾಗಿಸಬೇಕಿದೆ. ಎಲ್ಲ ಮಹನೀಯರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವ ಮೂಲಕ ಅವರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ತಿಳಿಹೇಳಿದರು.

ಜನಪದ ವಿದ್ವಾಂಸ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಜುಂಜಪ್ಪ ಸಾಂಸ್ಕೃತಿಕ ನಾಯಕನಾಗಿದ್ದವರು. ಇವರ ಕೀರ್ತಿ ತುಮಕೂರು ಜಿಲ್ಲೆಗೆ ಮಾತ್ರ ಸೀಮಿತವಾಗದೆ, ಇಡೀ ರಾಜ್ಯದ ಹಳ್ಳಿಗರಿಗೆ ಗೋ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿದರು. ಶಿರಾ- ಗುಬ್ಬಿ ಭಾಗದಲ್ಲಿ ಈ ದೇವರ ಆರಾಧನೆ ಮೂಲಕವೇ ಗೋಪಾಲನೆ, ಕುರಿಮೇಕೆ ಸಾಕಣೆ ನಡೆಯುತ್ತಿದ್ದು, ಈ ಕುಟುಂಬಗಳ ಜೀವನ ಜುಂಜಪ್ಪನ ನಂಬಿಕೆ ಮೇಲೆ ನಡೆಯುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಯಶೋದಮ್ಮ ಶಿವಣ್ಣ, ಐಎಫ್‌ಎಸ್ ಅಧಿಕಾರಿ ಚಿಕ್ಕಪ್ಪಯ್ಯ, ಪ್ರಾಂಶುಪಾಲ ಪ್ರೊ.ಸಿ.ಕೃಷ್ಣಪ್ಪ, ಶಿವಣ್ಣ ಬೆಳವಾಡಿ, ಪೂಜಾರ್ ಎರಪ್ಪ, ಮುಖಂಡರಾದ ಪ್ರಕಾಶ್, ರಾಜಣ್ಣ, ಗಂಗಾಧರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !