ಯೋಗಿಯಾಗಿ ದೈವತ್ವ ಪಡೆದ ವೇಮನ

7
ಮಹಾಯೋಗಿ ವೇಮನ ಜಯಂತ್ಯುತ್ಸವದಲ್ಲಿ ಸುನೀಲಗೌಡ ಪಾಟೀಲ

ಯೋಗಿಯಾಗಿ ದೈವತ್ವ ಪಡೆದ ವೇಮನ

Published:
Updated:
Prajavani

ವಿಜಯಪುರ: ಸಹನೆ, ತಾಳ್ಮೆ ಇದ್ದರೆ ಪರ್ವತವನ್ನೇ ದಾಟಬಹುದು ಎಂಬುದನ್ನು ತಿಳಿಸಿದ ಮಹಾನ್ ಚಿಂತಕ ವೇಮನರು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ನಗರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಂಗಲ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ವೇಮನ ಕೊಂಗವೀಡು ಸಂಸ್ಥಾನದ ರಾಜ ಗದ್ದಮ್ ವೇಮ ಅವರ ಮೂರನೇ ಪುತ್ರ. ಜೀವನದ ಬಗ್ಗೆ ಜುಗುಪ್ಸೆ ಹೊಂದಿದ ಅವರು ಪರಿವರ್ತನೆ ಹೊಂದಿ, ತತ್ವಜ್ಞಾನ ಹೇಳುತ್ತಾ, ಮಹಾ ಯೋಗಿಯಾಗಿ ದೈವತ್ವದ ಕಡೆಗೆ ಮುಖ ಮಾಡಿದರು. ಮನುಷ್ಯತ್ವದಿಂದ ದೈವತ್ವವನ್ನು ಪಡೆದ  ಸಾಧಕ. ವೇಮನರ ವಚನ ಸಾಹಿತ್ಯ ಸಾಮಾಜಿಕ ಮೌಢ್ಯತೆಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ ಎಂದರು.

ಬಿಎಲ್‌ಡಿಇ ಸಂಸ್ಥೆಯ ಪ್ರಚಾರಾಧಿಕಾರಿ ಡಾ.ಮಹಾಂತೇಶ ಬಿರಾದಾರ, ವೇಮನರು ಒಂದು ಜಾತಿ, ಕುಲಕ್ಕೆ ಸೀಮಿತವಲ್ಲ, ಇಡೀ ಪ್ರಪಂಚಕ್ಕೆ ಸೇರಿದವರು. ಇಂತಹ ಮಹಾ ನಾಯಕರನ್ನು ಒಂದೇ ಜಾತಿ, ಮತಕ್ಕೆ ಸೀಮಿತ ಮಾಡುತ್ತಿರುವುದು ನೋವಿನ ಸಂಗತಿ. ಒಂದೇ ಜಾತಿಗೆ, ಸಮಾಜಕ್ಕೆ ಸೀಮಿತಗೊಳ್ಳದೆ ಮಹಾನ್‌ ಪುರುಷರು, ಅವರ ತತ್ವ ಸಿದ್ಧಾಂತಗಳನ್ನು ಇಡೀ ಸಮಾಜಕ್ಕೆ ನೀಡಿದ್ದಾರೆ. ಅವರನ್ನು ಒಂದೇ ಜಾತಿಗೆ ಸೀಮಿತ ಮಾಡಬಾರದು ಎಂದು ಕಿವಿಮಾತು ಹೇಳಿದರು.

ವೇಮನರು ಸಮಾಜದಲ್ಲಿನ ಅನ್ಯಾಯ, ಅಸ್ಪೃಶ್ಯತೆ, ಅಸಮಾನತೆ ತೊಡೆದು ಹಾಕಲು ರಾಜ ವೈಭೋಗವನ್ನು ತ್ಯಜಿಸಿ ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದರು. ಆತ್ಮಶುದ್ಧಿ ಇಲ್ಲದ ಆಚಾರವೇಕೆ, ಮಡಿವಂತಿಕೆ ಶುದ್ಧಿ ಅಡುಗೆ ಏಕೆ ಎಂಬ ವೇಮನರ ವಚನದಂತೆ, ಆತ್ಮ, ಮನಸ್ಸು, ಆಚಾರ, ವಿಚಾರ, ನಿಷ್ಠೆ, ಕಾಯಕಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸು ಪರಿಶುದ್ಧವಾಗುತ್ತದೆಂದು ತಿಳಿಸಿದ ಮಹಾನ ಚಿಂತಕ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಎಚ್.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಮ್ಮ ಸಂಸ್ಥೆ ಅಧ್ಯಕ್ಷ ಸುರೇಶ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಾಹಿತಿ ಮಹಾಂತ ಗುಲಗಂಜಿ, ಹೇಮರಡ್ಡಿ ಮಲ್ಲಮ್ಮ ಸಂಸ್ಥೆಗೆ 150 ಪುಸ್ತಕ ವಿತರಿಸಿದರು.

ಸಮಾರಂಭಕ್ಕೂ ಮೊದಲು ಬಸವೇಶ್ವರ ವೃತ್ತದಿಂದ ಹೇಮರಡ್ಡಿ ಮಲ್ಲಮ್ಮ ಮಂಗಲ ಭವನವರೆಗೆ ವೇಮನ್‌ ಭಾವಚಿತ್ರದ ಮೆರವಣಿಗೆ ನಡೆಯಿತು. ಕಾರ್ಯಕ್ರಮ ನಂತರ ಕಲಾವಿದ ವಿರೇಶ ವಾಲಿ ತಂಡದಿಂದ ವಚನ ಗಾಯನ ಮಾಡಿದ್ದರು. ಸೀಮಾ ಮಹೀಂದ್ರಕರ ತಂಡದಿಂದ ನೃತ್ಯರೂಪಕ ನಡೆಯಿತು.

ತಹಸೀಲ್ದಾರ್‌ ಮೋಹನಕುಮಾರಿ ಹೇಮರಡ್ಡಿ, ಸಾಹಿತಿ ಮಹಾಂತ ಗುಲಗಂಜಿ, ಗಡಿ ಪ್ರಾಧಿಕಾರಿದ ಮಾಜಿ ಅಧ್ಯಕ್ಷ ಸುಭಾಸ ಛಾಯಗೋಳ, ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ರೆಡ್ಡಿ ಸಮಾಜದ ಮುಖಂಡರಾದ ಎಚ್.ಆರ್ ಬಿರಾದಾರ, ಡಾ.ಕರಿಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !