ಹೊಸ ಸರ್ಕಾರ ಅಸ್ತಿತ್ವಕ್ಕೆ ಸಂಸದರಿಗೆ ಸುಪಾರಿ: ಐವನ್ ಡಿಸೋಜ ಆರೋಪ

7

ಹೊಸ ಸರ್ಕಾರ ಅಸ್ತಿತ್ವಕ್ಕೆ ಸಂಸದರಿಗೆ ಸುಪಾರಿ: ಐವನ್ ಡಿಸೋಜ ಆರೋಪ

Published:
Updated:
Prajavani

ಮಂಗಳೂರು: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವುದಕ್ಕೆ ಬಿಜೆಪಿ ಸಂಸದರಿಗೆ ಸುಪಾರಿ ನೀಡಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌–ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿಸಲು ಸಂಚು ನಡೆದಿದೆ. ಸಮ್ಮಿಶ್ರ ಸರ್ಕಾರಗಳು ದೀರ್ಘ ಕಾಲ ಇರುವುದಿಲ್ಲ ಎಂಬ ಸಂದೇಶ ರವಾನಿಸಲು ಈ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಎಲ್ಲರೂ ಬೆಂಬಲಿಸಬೇಕೆಂಬ ಮನಸ್ಥಿತಿ ರೂಪಿಸಲು ಈ ಹುನ್ನಾರ ನಡೆದಿದೆ’ ಎಂದರು.

‘ಅಧಿಕಾರವಿಲ್ಲದೇ ಯಡಿಯೂರಪ್ಪ ಕಂಗೆಟ್ಟಿದ್ದಾರೆ. ಕೆಜೆಪಿ ಕಟ್ಟಿಕೊಂಡಿದ್ದ ತಮ್ಮನ್ನು ಬಿಜೆಪಿಗೆ ಮರಳಿ ಕರೆತಂದು ಅಧಿಕಾರ ನೀಡದೇ ವಂಚಿಸಿದ್ದಾರೆ ಎಂಬ ಭಾವನೆ ಅವರಲ್ಲಿದೆ. ನನ್ನಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದೆ. ಅದಕ್ಕೆ ಪ್ರತಿಫಲವಾಗಿ ನೀವು (ಸಂಸದರು) ವಿರೋಧ ಪಕ್ಷಗಳ ಒಬ್ಬೊಬ್ಬ ಶಾಸಕರ ರಾಜೀನಾಮೆ ಕೊಡಿಸಿ, ಸರ್ಕಾರ ಪತನಗೊಳಿಸಬೇಕು ಎಂಬುದಾಗಿ ಯಡಿಯೂರಪ್ಪ ತಾಕೀತು ಮಾಡಿರುವ ಮಾಹಿತಿ ನಮಗೆ ಲಭ್ಯವಾಗಿದೆ’ ಎಂದು ಐವನ್‌ ಹೇಳಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಗೆ ₹30 ಕೋಟಿಯಿಂದ ₹60 ಕೋಟಿಯವರಿಗೆ ಆಮಿಷ ಒಡ್ಡಲಾಗಿದೆ. ಅದರ ಜೊತೆಗೆ ಮರು ಚುನಾವಣೆಯ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವ ಭರವಸೆಯನ್ನೂ ನೀಡಲಾಗುತ್ತಿದೆ. ಕಾಂಗ್ರೆಸ್‌ ಶಾಸಕರು ಆಮಿಷಕ್ಕೆ ಬಲಿಯಾಗುವುದಿಲ್ಲ. ಶಾಸಕರ ಜೊತೆಗಿನ ಮುಖಾಮುಖಿ ಚರ್ಚೆಯ ಬಳಿಕ ಪಕ್ಷದ ನಾಯಕರಿಗೆ ಈ ವಿಶ್ವಾಸ ಬಂದಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 190ರಿಂದ 240 ಸ್ಥಾನ ಗಳಿಸಲಿದ್ದು, ಬಿಜೆಪಿಯ ಬಲ 130ಕ್ಕೆ ಕುಸಿಯಲಿದೆ ಎಂಬುದಾಗಿ ಸಮೀಕ್ಷೆಗಳು ಹೇಳಿವೆ. ಇದರಿಂದ ಬಿಜೆಪಿ ಧೈರ್ಯ ಕಳೆದುಕೊಂಡಿದೆ. ಈ ಕಾರಣದಿಂದಾಗಿಯೇ ಈಗ ಹೊಸ ಹೊಸ ಆಟಗಳನ್ನು ಹೂಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮೋದಿ ನೇತೃತ್ವದ ಸರ್ಕಾರಕ್ಕೆ ಜನರ ಮುಂದಿಡಲು ಯಾವುದೇ ಸಾಧನೆಗಳ ಬಲವಿಲ್ಲ. ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ದೇಶದ ವಿದೇಶಿ ಸಾಲದ ಮೊತ್ತವನ್ನು ₹54 ಲಕ್ಷ ಕೋಟಿಗಳಿಂದ ₹82 ಲಕ್ಷ ಕೋಟಿಗೆ ಹೆಚ್ಚಿಸಿದ್ದೇ ಮೋದಿಯವರ ಸಾಧನೆ. ಭೇಟಿ ಬಚಾವೋ ಭೇಟಿ ಪಡಾವೋ ಅಭಿಯಾನದ ಶೇ 55ರಷ್ಟು ಅನುದಾನ ಪ್ರಚಾರಕ್ಕೆ ಬಳಕೆಯಾಗಿದೆ ಎಂದು ಸರ್ಕಾರವೇ ಹೇಳಿಕೊಂಡಿದೆ. ಇನ್ನು ಏನು ಉಳಿದಿದೆ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !