ನಾನು ಪತ್ರ ಬರೆದಿಲ್ಲ: ಅಮಿತಾಭ್‌

ಮಂಗಳವಾರ, ಮಾರ್ಚ್ 19, 2019
20 °C

ನಾನು ಪತ್ರ ಬರೆದಿಲ್ಲ: ಅಮಿತಾಭ್‌

Published:
Updated:

ಮುಂಬೈ: ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರಗಳಿಂದ ದೂರ ಇರಬೇಕು ಎಂದು ಐಸಿಸಿಯನ್ನು ಕೋರಿದ ಪತ್ರ ನಾನು ಬರೆದದ್ದಲ್ಲ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ತಿಳಿಸಿದರು.

40 ಸೈನಿಕರ ಸಾವಿಗೆ ಕಾರಣವಾದ ಪುಲ್ವಾಮಾ ದಾಳಿಯ ನಂತರ ಐಸಿಸಿಗೆ ಪತ್ರ ಬರೆದಿದ್ದ ಬಿಸಿಸಿಐ ಉಗ್ರರ ಪರವಾಗಿರುವ ರಾಷ್ಟ್ರಗಳನ್ನು ದೂರ ಇರಿಸುವಂತೆ ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಐಸಿಸಿ ಇಂಥ ವಿಷಯಗಳಲ್ಲಿ ಮೂಗು ತೂರಿಸಲು ಸಾಧ್ಯವಿಲ್ಲ ಎಂದಿತ್ತು.

ಸೋಮವಾರ ನಡೆದ ಐಪಿಎಲ್‌‌ಗೆ ಸಂಬಂಧಿಸಿದ ಕಾರ್ಯಕ್ರಮದ ನಂತರ ಮಾತನಾಡಿದ ಅಮಿತಾಭ್‌ ‘ಪತ್ರ ನಾನು ಬರೆದದ್ದಲ್ಲ. ಆದರೆ ಬಿಸಿಸಿ ಮತ್ತು ಐಸಿಸಿಗೆ ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಇಲ್ಲ’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !