ಕೊನೆಯ ಓವರ್‌ನಲ್ಲಿ ಮುಗ್ಗರಿಸಿದ ಮಂದಾನ ಬಳಗ

ಶನಿವಾರ, ಮಾರ್ಚ್ 23, 2019
24 °C
ಮಹಿಳಾ ಕ್ರಿಕೆಟ್; 3–0ಯಿಂದ ಸರಣಿ ಗೆದ್ದ ಇಂಗ್ಲೆಂಡ್

ಕೊನೆಯ ಓವರ್‌ನಲ್ಲಿ ಮುಗ್ಗರಿಸಿದ ಮಂದಾನ ಬಳಗ

Published:
Updated:
Prajavani

ಗುವಾಹಟಿ: ಶನಿವಾರ ಇಲ್ಲಿ ಆರು ಎಸೆತಗಳಲ್ಲಿ ಮೂರು ರನ್‌ ಗಳಿಸಿದ್ದ ಭಾರತ ಮಹಿಳಾ ತಂಡವು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆದ್ದು ಸಂಭ್ರಮಿಸಬಹುದಿತ್ತು.

ಆದರೆ, ಕ್ರೀಸ್‌ನಲ್ಲಿದ್ದ ಅನುಭವಿ ಬ್ಯಾಟ್ಸ್‌ವುಮನ್ ಮಿಥಾಲಿರಾಜ್ ಆವರು ಈ ಸಣ್ಣ ಸವಾಲನ್ನು ನಿಭಾಯಿಸುವಲ್ಲಿ ಎಡವಿದ್ದು ಇಂಗ್ಲೆಂಡ್ ತಂಡವು 3–0ಯಿಂದ ಟ್ವೆಂಟಿ–20 ಸರಣಿಯನ್ನು ಗೆದ್ದುಕೊಳ್ಳಲು ಕಾರಣವಾಯಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 119 ರನ್ ಗಳಿಸಿತ್ತು. ಅನುಜಾ ಪಾಟೀಲ (13ಕ್ಕೆ2) ಮತ್ತು ಹರ್ಲಿನ್ ಡಿಯೊಲ್ (13ಕ್ಕೆ2) ಅವರಿಬ್ಬರ ಉತ್ತಮ ಬೌಲಿಂಗ್‌ನಿಂದ ಇಂಗ್ಲೆಂಡ್ ತಂಡವು ಸಾಧಾರಣ ಮೊತ್ತ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡ‌ವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 118 ರನ್ ಗಳಿಸಿತು.

ಆದರೆ, ಭಾರತ ತಂಡದ ಆರಂಭ ಉತ್ತಮವಾಗರಲಿಲ್ಲ. ಮೊದಲ ವಿಕೆಟ್ ಎರಡನೇ ಓವರ್‌ನಲ್ಲಿ ಹರ್ಲಿನ್ ಡಿಯೊಲ್ ಔಟಾದರು. ಆದರೆ, ಇನ್ನೊಂದು ಬದಿಯಲ್ಲಿದ್ದ ನಾಯಕಿ ಸ್ಮೃತಿ ಮಂದಾನ (58; 39ಎಸೆತ, 8ಬೌಂಡರಿ, 1ಸಿಕ್ಸರ್)  ಸುಂದರ ಅರ್ಧಶತಕ ಹೊಡೆದರು.

 ಅವರು ಕ್ರೀಸ್‌ನಲ್ಲಿದ್ದರೂ ಕೂಡ ಕೊನೆಯ ಓವರ್‌ನಲ್ಲಿ ಗೆಲುವಿಗೆ ಅಗತ್ಯವಿದ್ದ ಮೂರು ರನ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ  ಭಾರತ ತಂಡವು ಇಂಗ್ಲೆಂಡ್ ಎದುರಿನ ಕೊನೆಯ ಟ್ವೆಂಟಿ–20 ಪಂದ್ಯದಲ್ಲಿ ಕೇವಲ ಒಂದು ರನ್‌ನಿಂದ ಸೋಲನುಭವಿಸಿತು. ಜೆಮಿಮಾ ರಾಡ್ರಿಗಸ್ 11 ರನ್ ಗಳಿಸಿ ಔಟಾದ ನಂತರ ಸ್ಮೃತಿ ಜೊತೆಗೂಡಿದ ಮಿಥಾಲಿ ರಾಜ್  ಮೂರನೇ ವಿಕೆಟ್‌ಗೆ 28 ರನ್ ಗಳಿಸಿದರು. ಆದರೆ 13ನೇ ಓವರ್‌ನಲ್ಲಿ ಸ್ಮೃತಿ ಔಟಾದ ನಂತರ ಉಳಿದ ಬ್ಯಾಟ್ಸ್‌ವುಮನ್‌ಗಳು ಬೇಗನೆ ಔಟಾದರೂ ಮಿಥಾಲಿ ಇನ್ನೊಂದೆಡೆ ಗಟ್ಟಿಯಾಗಿ ನಿಂತು ಆಡುತ್ತಿದ್ದರು. ಕೊನೆಯ ಒಂದು ಓವರ್‌ನಲ್ಲಿ ಮೂರು ರನ್‌ಗಳನ್ನು ಹೊಡೆದಿದ್ದರೆ ಗೆಲ್ಲಬಹುದಿತ್ತು. ಆದರೆ ಇದೇ ಓವರ್‌ನಲ್ಲಿ ಭಾರತಿ ಫೂಲ್‌ಮಾಲಿ ಮತ್ತು ಅನುಜಾ ಪಾಟೀಲ  ವಿಕೆಟ್‌ಗಳು ಪತನವಾದವು. ಆದರೂ ಇದ್ದ ಸಣ್ಣ ಅವಕಾಶವನ್ನು ಮಿಥಾಲಿ ಮತ್ತು ಶಿಖಾ ಪಾಂಡೆ ಉಪಯೋಗಿಸಿಕೊಳ್ಳಲಿಲ್ಲ.

ಸಂಕ್ಷಿಪ್ತ ಸ್ಕೋರು:

ಇಂಗ್ಲೆಂಡ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 119 (ಡೇನಿಯಲ್ ವೈಟ್ 24, ಟ್ಯಾಮಿ ಬೆಮೌಂಟ್ 29, ಹೀಥರ್ ನೈಟ್ 11, ಆ್ಯಮಿ ಜೋನ್ಸ್‌ 26, ಸೋಫಿಯಾ ಬ್ರೌನ್ 14, ಅನ್ಯಾ ಶ್ರುಭಸೋಲ್ 10, ಅನುಜಾ ಪಾಟೀಲ 13ಕ್ಕೆ2, ಹರ್ಲಿನ್ ಡಿಯೊಲ್ 13ಕ್ಕ2),

ಭಾರತ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 118 (ಸ್ಮೃತಿ ಮಂದಾನ 58, ಜಿಮಿಮಾ ರಾಡ್ರಿಗಸ್ 11, ಮಿಥಾಲಿ ರಾಜ್ 30, ಕೇಟ್ ಕ್ರಾಸ್ 18ಕ್ಕೆ2)

ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ  ಒಂದು ರನ್ ಜಯ. ಸರಣಿಯಲ್ಲಿ 3–0 ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !