ದೂರ ಶಿಕ್ಷಣ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ

ಭಾನುವಾರ, ಏಪ್ರಿಲ್ 21, 2019
32 °C

ದೂರ ಶಿಕ್ಷಣ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯವು 2019–2020ನೇ ಶೈಕ್ಷಣಿಕ ಸಾಲಿನ ಕನ್ನಡ ಮಾಧ್ಯಮದ ಮೂರು ವಿಷಯಗಳಲ್ಲಿ ದೂರ ಶಿಕ್ಷಣ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಿದೆ.‌

ಕೃಷಿಯ ನೂತನ ಆವಿಷ್ಕಾರಗಳನ್ನು ರೈತರಿಗೆ ತಲುಪಿಸುವುದು ಇದರ ಉದ್ದೇಶವಾಗಿದೆ.

ವಿದ್ಯಾರ್ಹತೆ: ವರ್ಷದ ‘ಕೃಷಿ ಡಿಪ್ಲೊಮಾ’ಕ್ಕೆ (ಶುಲ್ಕ ₹ 10 ಸಾವಿರ) ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರು ಹಾಗೂ ಸರ್ಟಿಫಿಕೇಟ್‌ ಕೋರ್ಸ್‌ಗಳಾದ ಒಂದು ವರ್ಷದ ‘ಸಮಗ್ರ ಕೃಷಿ’ ಕೋರ್ಸ್‌ಗೆ (ಶುಲ್ಕ ₹ 1500) ಏಳನೇ ತರಗತಿ ಉತ್ತೀರ್ಣರಾದವರು ಮತ್ತು ವರ್ಷದ ‘ಸಾವಯವ ಕೃಷಿ‘ ಕೋರ್ಸ್‌ಗೆ (ಶುಲ್ಕ ₹ 200) ಓದು–ಬರಹ ಬಲ್ಲವರು ಅರ್ಜಿ ಸಲ್ಲಿಸಬಹುದು.

ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ (www.uasbangalore.edu.in) ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಏಪ್ರಿಲ್‌ 30ರ ಒಳಗೆ ಸಲ್ಲಿಸಬೇಕು. ಕೃಷಿ ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಾಣಾಧಿಕಾರಿ ಹೆಸರಿನಲ್ಲಿ ₹ 100ರ ಡಿ.ಡಿಯನ್ನು ಪಡೆದು ಅರ್ಜಿ ಜೊತೆ ಲಗತ್ತಿಸಬೇಕು.

ವಿಳಾಸ: ಸಂಯೋಜಕರು, ದೂರ ಶಿಕ್ಷಣ ಘಟಕ, ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾಲಯ, ಹೆಬ್ಬಾಳ, ಬೆಂಗಳೂರು.

ಸಂಪರ್ಕ: 080 23418884

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !