ಹಲ್ಲಿನ ಆರೋಗ್ಯ ಕಾಪಾಡುವಸದಂತ ಪ್ರಾಣಾಯಾಮ

ಶುಕ್ರವಾರ, ಏಪ್ರಿಲ್ 19, 2019
27 °C

ಹಲ್ಲಿನ ಆರೋಗ್ಯ ಕಾಪಾಡುವಸದಂತ ಪ್ರಾಣಾಯಾಮ

Published:
Updated:
Prajavani

‘ಸದಂತ ಪ್ರಾಣಾಯಾಮ’ ಎಂಬುದು ಹಲ್ಲುಗಳ ಮೂಲಕ ಉಸಿರಾಡುವ (ಗಾಳಿಯನ್ನು ತೆಗೆದುಕೊಳ್ಳುವ) ತಂತ್ರವಾಗಿದೆ. ಇದು ಒಂದು ಅತ್ಯುತ್ತಮವಾದ (ದೇಹ ಮತ್ತು ಮನಸ್ಸು) ತಂಪಾನ್ನಾಗಿಸುವ ಪ್ರಾಣಾಯಾಮವಾಗಿದೆ.

ನಿಧಾನವಾಗಿ ಹಿಸ್ ಶಬ್ದದಂತೆ ಗಾಳಿಯನ್ನು ಹಲ್ಲುಗಳ ಅಂತರದಲ್ಲಿ ತೆಗೆದುಕೊಳ್ಳಬೇಕು.

ಅಭ್ಯಾಸ ಕ್ರಮ: ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಂಡು, (ಬೆನ್ನು, ಕುತ್ತಿಗೆ, ಶಿರಸ್ಸು ನೇರವಾಗಿಬೇಕು) ಬಾಯಿಯನ್ನು ತುಸು ಅಗಲಿಸಿ ಮೇಲಿನ ಹಾಗೂ ಕೆಳಗಿನ ಹಲ್ಲುಗಳನ್ನು ಜೋಡಿಸಬೇಕು. ನಂತರ ಹಲ್ಲುಗಳ ಸಂಧಿಗಳ ಮೂಲಕ ಗಾಳಿಯನ್ನು ಒಳಕ್ಕೆ ಎಳೆದುಕೊಂಡು ತುಸು ಹೊತ್ತು ಒಳಗೆ ಹಿಡಿದಿಡಿ. ಆಮೇಲೆ ಮೂಗಿನ ಮೂಲಕ ಉಸಿರನ್ನು ನಿಧಾನವಾಗಿ ಹಿಂದಕ್ಕೆ ಬಿಡಿ. ಈ ರೀತಿ 3, 6 ಅಥವಾ 9ಬಾರಿ ಅಭ್ಯಾಸ ಮಾಡಬೇಕು.

ಉಪಯೋಗಗಳು: ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ. ಮೌಖಿಕ ಕುಳಿಯನ್ನು ಸಡಿಲಗೊಳಿಸುತ್ತದೆ. ಬಾಯಿ ಹುಣ್ಣಿನ ಸಮಸ್ಯೆ ಇರುವವರಿಗೆ ಈ ಪ್ರಾಣಾಯಾಮ ಸಹಕಾರಿಯಾಗುತ್ತದೆ. ರಾತ್ರಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ ಉಂಟಾಗುವ ಒತ್ತಡ ಮತ್ತು ಖಿನ್ನತೆಯನ್ನು ಹೋಗಲಾಡಿಸಿ ಮನಸ್ಸು ಹಗುರವಾಗುವಂತೆ ಮಾಡುತ್ತದೆ. ಮಾನಸಿಕ ಒತ್ತಡ, ಆತಂಕವನ್ನು ತೆಗೆದು ಹಾಕುತ್ತದೆ. ಉಸಿರಾಟದ ವ್ಯವಸ್ಥೆಯ ಕಾಯಿಲೆಗಳಿಗೆ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಅತೀ ಸೂಕ್ಷ್ಮತೆಯನ್ನು ಹೊಂದಿರುವ ಒಸಡುಗಳಿಗೆ ಈ ಪ್ರಾಣಾಯಾಮ ಪ್ರಯೋಜನಕಾರಿಯಾಗಿದೆ. ಮನಸ್ಸಿನ ಒತ್ತಡ, ಗೊಂದಲಗಳನ್ನು ನಿವಾರಿಸಲು ಇದು ಉಪಯುಕ್ತವಾಗಿದೆ. ನಿದ್ರಾಹೀನತೆ, ಪಿತ್ತವಿಕಾರ ಸಮಸ್ಯೆಗಳಿಂದಬಳಲುತ್ತಿರುವವರಿಗೆ ಹಾಗೂ ವಸಡಿನ ತೊಂದರೆಯಿಂದ ಬಳಲುವವರಿಗೂ ಇದು ಸಹಕಾರಿಯಾಗಿದೆ. ಕಣ್ಣಿನ ಆಯಾಸ ಪರಿಹಾರವಾಗುತ್ತದೆ.

ಮುನ್ನೆಚ್ಚರಿಕೆಗಳು: ಅವಸರದಿಂದ ಹಾಗೂ ಒತ್ತಡದಿಂದ ಅಭ್ಯಾಸ ಮಾಡಬೇಡಿ. ಕೃತಕ ಹಲ್ಲಿನವರು ಅಭ್ಯಾಸ (ಸೆಟ್ ಹಲ್ಲಿನವರು) ಮಾಡುವುದು ಬೇಡ. ವೇಗದ ಉಸಿರಾಟವನ್ನು ಮಾಡಬೇಡಿ. ಶೀತ ಇರುವವರು ಅಭ್ಯಾಸ ಮಾಡುವುದು ಬೇಡ. ಬಾಯಿಯಲ್ಲಿ ದುರ್ಗಂಧ ಶ್ವಾಸದವರಿಗೆ ಈ ಸದಂತ ಪ್ರಾಣಾಯಾಮ ಸಹಕಾರಿಯಾಗುತ್ತದೆ. ಸುಮಾರು 12 ರಿಂದ 16 ಬಾರಿ ಅಭ್ಯಾಸ ಮಾಡಬಹುದು. ಶೀಘ್ರವಾಗಿ ಈ ಪ್ರಾಣಾಯಾಮ ಅಭ್ಯಾಸ ಮಾಡಬಾರದು. ಉಸಿರಾಟ ಕ್ರಮದಲ್ಲಿದ್ದರೆ ಹೃದಯವು ಶಾಂತವಾಗುತ್ತದೆ ಮತ್ತು ಆಯಾಸವಾಗದಂತೆ ನೋಡಿಕೊಳ್ಳುತ್ತದೆ. ಗುರುಮುಖೇನ ಕಲಿತು ಅಭ್ಯಾಸ ನಡೆಸಿ. ಕೊನೆಯಲ್ಲಿ ಶವಾಸನ ಮಾಡಬೇಕು.

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !