ಮಾಯಾವತಿ ಪ್ರಧಾನಿ ಆಗುವುದು ನಿಶ್ಚಿತ: ಕೆ.ಸಿ.ಹನುಮಂತರಾಯ ವಿಶ್ವಾಸ

ಗುರುವಾರ , ಏಪ್ರಿಲ್ 25, 2019
31 °C

ಮಾಯಾವತಿ ಪ್ರಧಾನಿ ಆಗುವುದು ನಿಶ್ಚಿತ: ಕೆ.ಸಿ.ಹನುಮಂತರಾಯ ವಿಶ್ವಾಸ

Published:
Updated:

ತಿಪಟೂರು: ಲೋಕಸಭಾ ಚುನಾವಣೆಯಲ್ಲಿ ಬಿಎಸ್‍ಪಿ ಹೆಚ್ಚು ಸ್ಥಾನಗಳನ್ನು ಗೆದ್ದು ಮಾಯಾವತಿ ಪ್ರಧಾನಿ ಆಗುವುದು ನಿಶ್ಚಿತ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಎಸ್‍ಪಿ ಅಭ್ಯರ್ಥಿ ಕೆ.ಸಿ.ಹನುಮಂತರಾಯ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಬಿಎಸ್‌ಪಿ ಪಕ್ಷದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ 4 ಬಾರಿ ಮುಖ್ಯಮಂತ್ರಿಯಾಗಿ ಸ್ಪಷ್ಟ ಮತ್ತು ಸಮಗ್ರ ಆಡಳಿತ ನೀಡಿದ ಮಾಯಾವತಿ ಪ್ರಧಾನಿ ಆಗಲು ಅರ್ಹರಿದ್ದಾರೆ. ದಲಿತರು, ಹಿಂದುಳಿದವರ ಪರವಾಗಿ ಅವರು ಹಲವಾರು ಯೋಜನೆಗಳನ್ನು ನೀಡಿದ್ದರು. ಅವರ ಬಗ್ಗೆ ಈ ಸಮುದಾಯಗಳಲ್ಲಿ ಒಲವಿದೆ. ಜಿಲ್ಲೆಯ ಜ್ವಲಂತ ನೀರಿನ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿಯೊಂದಿಗೆ ಕ್ಷೇತ್ರದಲ್ಲಿ ಮತ ಯಾಚಿಸುತ್ತೇನೆ ಎಂದರು.

ಕರ್ನಾಟಕದ ವಿಭಾಗಿಯ ಸಂಯೋಜಕ ಶೋಲಯ್ಯ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ದಲಿತ ವಿರೋಧಿಯಾಗಿದೆ. ಅದನ್ನು ಕಿತ್ತೊಗೆಯಲು ಚುನಾವಣೆಯಲ್ಲಿ ಸಂಘಟಿತ ಹೋರಾಟ ಮಾಡಬೇಕು ಎಂದು ತಿಳಿಸಿದರು.

ಬಿಎಸ್‍ಪಿ ಜಿಲ್ಲಾ ಘಟಕದ ಅಧ್ಯಕ್ಷ ದಾಸಪ್ಪ, ನಗರ ಉಸ್ತುವಾರಿ ರುದ್ರಪ್ಪ, ತಿಪಟೂರು ತಾಲ್ಲೂಕು ಅಧ್ಯಕ್ಷ ಬಿ.ಕೆ.ರಾಮಯ್ಯ, ಶೆಟ್ಟಿಹಳ್ಳಿ ಶಿವಣ್ಣ, ಧರಣೀಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !