ಮಹಿಳೆ ಥಳಿಸಿ ಚಿನ್ನಾಭರಣ ಕಳವು

ಶನಿವಾರ, ಏಪ್ರಿಲ್ 20, 2019
32 °C

ಮಹಿಳೆ ಥಳಿಸಿ ಚಿನ್ನಾಭರಣ ಕಳವು

Published:
Updated:

ಕುಣಿಗಲ್: ಮನೆಯಂಗಳದ ಶೌಚಾಲಯಕ್ಕೆ ಬಂದ ಮಹಿಳೆಯನ್ನು ಥಳಿಸಿ 90 ಗ್ರಾಂ ಚಿನ್ನಾಭರಣ ದೋಚಿದ ಘಟನೆ ಪಟ್ಟಣದ ಮಹಾವೀರ ನಗರದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಗಂಗಾಹೊನ್ನಮ್ಮ (85) ಬೆಳಗಿನ ಜಾವ 5ರ ಸಮಯದಲ್ಲಿ ಮನೆಯಂಗಳದ ಶೌಚಾಲಯಕ್ಕೆ ತೆರಳುವ ಸಮಯದಲ್ಲಿ ಇಬ್ಬರು ದುಷ್ಕರ್ಮಿಗಳು ಬಂದು ಥಳಿಸಿ ಚಿನ್ನದ ಕಾಸಿನ ಸರ, ಬಳೆ ಮತ್ತು ಓಲೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಮಗ ಶ್ರೀನಿವಾಸ್ ಬಂದು ನೋಡಿದಾಗ ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !