ಬಿಳಿಯೂರು: ವಿದ್ಯುತ್ ಕಂಬದಿಂದ ಬಿದ್ದು ಗಾಯ

ಶುಕ್ರವಾರ, ಏಪ್ರಿಲ್ 19, 2019
27 °C

ಬಿಳಿಯೂರು: ವಿದ್ಯುತ್ ಕಂಬದಿಂದ ಬಿದ್ದು ಗಾಯ

Published:
Updated:

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಿಳಿಯೂರು ಗಾಮದ ಮಂಜತ್ತೊಟ್ಟು ಎಂಬಲ್ಲಿ ಭಾನುವಾರ ಸಂಜೆ ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದ ಮೆಸ್ಕಾಂ ಲೈನ್ ಮೆಕ್ಯಾನಿಕ್ ಒಬ್ಬರು ಆಯತಪ್ಪಿ ಕಂಬದಿಂದ ಬಿದ್ದು ಗಾಯಗೊಂಡಿದ್ದಾರೆ.

ವಿದ್ಯುತ್ ಕಂಬದಿಂದ ಬಿದ್ದು ಗಾಯಗೊಂಡಿರುವ ವ್ಯಕ್ತಿ ಬೆಳ್ತಂಗಡಿ ತಾಲ್ಲೂಕಿನ ಕರಾಯ ನಿವಾಸಿ, ಬಿಳಿಯೂರಿನಲ್ಲಿ ಲೈನ್ ಮೆಕ್ಯಾನಿಕ್ ಆಗಿರುವ ಗೋಪಾಲ.

ಮೂರು ದಿನಗಳ ಹಿಂದೆ ಮಳೆ, ಗಾಳಿಗೆ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು ವಿದ್ಯುತ್ ಕಡಿತಗೊಂಡಿತ್ತು. ಇದನ್ನು ಸರಿಪಡಿಸಲೆಂದು ಪವರ್‌ಮ್ಯಾನ್‌ ಮಹೇಶ್ ಜೊತೆಗೂಡಿ ಕೆಲಸ ಮಾಡುತ್ತಿದ್ದಾಗ ಮಹೇಶ್ ಇನ್ನೊಂದು ಕಡೆ ವಿದ್ಯುತ್ ಲೈನ್ ಸರಿಪಡಿಸುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ವಿದ್ಯುತ್ ಕಂಬ ಹತ್ತಿದ್ದ ಗೋಪಾಲ ಆಯತಪ್ಪಿ ಬಿದ್ದಿದ್ದಾರೆ.

ಗಾಯಾಳು ಗೋಪಾಲರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !