ಮೂವರು ವಿದ್ಯಾರ್ಥಿಗಳು ನೀರುಪಾಲು

ಶನಿವಾರ, ಏಪ್ರಿಲ್ 20, 2019
25 °C

ಮೂವರು ವಿದ್ಯಾರ್ಥಿಗಳು ನೀರುಪಾಲು

Published:
Updated:

ಮಂಡ್ಯ: ತಾಲ್ಲೂಕಿನ ಮಂಗಲ ಗ್ರಾಮದ ಕೆರೆಗೆ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಸೋಮವಾರ ಮುಳುಗಿ ಮೃತಪಟ್ಟಿದ್ದಾರೆ.

ನಗರದ ಹಾಲಹಳ್ಳಿ ಬಡಾವಣೆಯ ಅರ್ಜುನ್‌ (15), ಚಂದನ್‌ (16), ಚಂದ್ರ (15) ಮೃತಪಟ್ಟವರು. ಡ್ಯಾಫೋಡಿಲ್ಸ್‌ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಅವರು ಪರೀಕ್ಷೆ ಮುಗಿದ ನಂತರ ಮಂಗಲ ಕೆರೆಯಲ್ಲಿ ಈಜಲು ತೆರಳಿದ್ದರು. ಒಬ್ಬ ನೀರಿನಲ್ಲಿ ಮುಳುಗುತ್ತಿದ್ದಾಗ ಮತ್ತೊಬ್ಬ ರಕ್ಷಣೆಗೆ ಮುಂದಾಗಿದ್ದಾರೆ. ಇಬ್ಬರೂ ಮುಳುಗುವಾಗ ಮತ್ತೊಬ್ಬ ರಕ್ಷಣೆಗೆ ಧಾವಿಸಿದ್ದಾನೆ. ಕೊನೆಗೆ ಮೂವರೂ ಮುಳುಗಿ ಮೃತಪಟ್ಟಿದ್ಧಾರೆ.

ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಕೆರೆಯ ಸುತ್ತಲೂ ಸೇರಿದ್ದರು. ಮೃತ ಬಾಲಕರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಎರಡು ಮೃತದೇಹಗಳು ಸಿಕ್ಕಿದ್ದು ಮತ್ತೊಬ್ಬನ ಮೃತದೇಹಕ್ಕೆ ಹುಡುಕಾಟ ನಡೆಸಲಾಗುತ್ತಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 5

  Sad
 • 0

  Frustrated
 • 0

  Angry

Comments:

0 comments

Write the first review for this !