ನಿಯೋಜಿತ ಕೇಂದ್ರಕ್ಕೆ ತೆರಳಿದ ಸಿಬ್ಬಂದಿ

ಬುಧವಾರ, ಏಪ್ರಿಲ್ 24, 2019
33 °C

ನಿಯೋಜಿತ ಕೇಂದ್ರಕ್ಕೆ ತೆರಳಿದ ಸಿಬ್ಬಂದಿ

Published:
Updated:
Prajavani

ಬಾಗೇಪಲ್ಲಿ: ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ತಹಶೀಲ್ದಾರ್‌ ನೇತೃತ್ವದಲ್ಲಿ ಬುಧವಾರ ಪಟ್ಟಣದ ನ್ಯಾಷನಲ್ ಕಾಲೇಜು ಆವರಣದಲ್ಲಿ ಮತ ಕೇಂದ್ರಗಳಿಗೆ ಅಗತ್ಯವಿರುವ ಪರಿಕರಗಳನ್ನು ವಿತರಿಸಲಾಯಿತು.

ಚುನಾವಣೆ ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ತಮಗೆ ನೀಡಿದ ಮತಯಂತ್ರ ಹಾಗೂ ಪರಿಕರಗಳನ್ನು ಪಡೆದು, ನಿಯೋಜಿತ ಮತದಾನ ಕೇಂದ್ರಕ್ಕೆ ತೆರಳಿದರು.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 263 ಮತಗಟ್ಟೆಗಳ ಕೇಂದ್ರಗಳಿವೆ. ಲಘುಮದ್ದೇಪಲ್ಲಿ, ಚೆಂಡೂರು, ಕಮ್ಮಡಿಕೆ ಮತಗಟ್ಟೆಗಳನ್ನು ಸೂಕ್ಷ್ಮ ಪ್ರದೇಶಗಳಾಗಿ ಗುರುತಿಸಲಾಗಿದೆ. ಕ್ಷೇತ್ರದಲ್ಲಿ 1,98,852 ಮತದಾರರ ಪೈಕಿ ಪುರುಷರು- 98,714, ಮಹಿಳೆಯರು- 1,00,105, ಇತರೆ-33 ಮಂದಿ ಇದ್ದಾರೆ. ಇದರಲ್ಲಿ ಅತಿಸೂಕ್ಷ್ಮ-50, ಸೂಕ್ಷ್ಮ-86, ಅತ್ಯಂತ ಸೂಕ್ಷ್ಮ-37, ಸಾಮಾನ್ಯ-140 ಮತಗಟ್ಟೆ ಕೇಂದ್ರಗಳನ್ನಾಗಿ ವಿಂಗಡಿಸಲಾಗಿದೆ.

‘ಕ್ಷೇತ್ರದಲ್ಲಿ ಚುನಾವಣಾ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಸೇರಿ 290 ಮಂದಿ, ಸಹಾಯಕ ಸಿಬ್ಬಂದಿ -558 ಮಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸಲಾಗಿದೆ. 22 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣೆಯಲ್ಲಿ ಮತದಾರರು ನಿರ್ಭಯ, ನಿರ್ಭಿತಿ ಇಲ್ಲದೆ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಬಹುದು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಶಾಂತಿಯುತವಾಗಿ ಚುನಾವಣಾ ಕಾರ್ಯ ಮುಗಿಸಬೇಕು’ ಎಂದು ಸಹಾಯಕ ಚುನಾವಣಾ ಅಧಿಕಾರಿ ಜಿ.ಆರ್.ನಟರಾಜ್ ಮನವಿ ಮಾಡಿದ್ದಾರೆ.

’ಬಾಗೇಪಲ್ಲಿ ವಿಧಾನಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆಗೆ ಶಾಂತಿಯುತವಾಗಿ ನಡೆಸಲು ಒಬ್ಬರು ಡಿವೈಎಸ್ಪಿ,  ಸಿಪಿಐ– 4, ಪಿಎಸ್‌ಐಗಳು– 4, ಸಹಾಯಕ ಪಿಎಸ್‌ಐ 17, ಪೊಲೀಸ್‌ ಕಾನ್‌ಸ್ಟೆಬಲ್‌ಗಳು- 115, ಗೃಹರಕ್ಷಕ ದಳದವರು- 186, ಅರೆ ಸೇನಾ ಪಡೆ– 21 ಮಂದಿಯನ್ನು ನೇಮಿಸಲಾಗಿದೆ. 18 ಸೆಕ್ಟರ್ ಸಂಚಾರ ಅಧಿಕಾರಿಗಳನ್ನು ಕರ್ತವ್ಯಕ್ಕೆ ನೇಮಿಸಲಾಗಿದೆ’ ಎಂದು ಸಿಪಿಐ ಕೆ.ಎಂ.ಶ್ರೀನಿವಾಸಪ್ಪ, ಪಿಎಸ್‌ಐ ಪಿ.ಎಂ.ನವೀನ್ ತಿಳಿಸಿದ್ದಾರೆ.

ಪಟ್ಟಣದ ನ್ಯಾಷನಲ್ ಕಾಲೇಜಿನ ಆವರಣದಲ್ಲಿ ಬೆಳಗಿನಿಂದ, ಮಧ್ಯಾಹ್ನದವರಿಗೂ ಚುನಾವಣಾ ಅಧಿಕಾರಿಗಳು, ಸಿಬ್ಬಂದಿಯವರು ಆಗಮಿಸಿದ್ದರು. ಕಾಲೇಜಿನ ತರಗತಿ ಕೊಠಡಿಗಳಲ್ಲಿ ಮತಯಂತ್ರಗಳು, ಪರಿಕರಗಳನ್ನು ಸಿದ್ಧದಪಡಿಸಿಕೊಂಡರು. ಹಿರಿಯ ಅಧಿಕಾರಿಗಳಿಂದ ಮತಯಂತ್ರದ ಬಳಕೆ ಬಗ್ಗೆ ಕೆಲವರು ಮಾಹಿತಿ ಪಡೆದರು. ಆಗಮಿಸಿದ ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ ಮಂದಿಗೆ ತಿಂಡಿ. ಊಟ, ಮಜ್ಜಿಗೆ, ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾಲೇಜಿನ ಹೊರ ಆವರಣದಲ್ಲಿ ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ಮತಯಂತ್ರ, ಪರಿಕರ ಹೊತ್ತಿ ಬಸ್‌ನಲ್ಲಿ ಪಯಣಿಸಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !