ಟ್ರಿಪೋಲಿ: ಸ್ಥಳಾಂತರವಾಗುವಂತೆ ಭಾರತೀಯರ ಸಲಹೆ

ಸೋಮವಾರ, ಮೇ 27, 2019
24 °C

ಟ್ರಿಪೋಲಿ: ಸ್ಥಳಾಂತರವಾಗುವಂತೆ ಭಾರತೀಯರ ಸಲಹೆ

Published:
Updated:

ನವದೆಹಲಿ: ಲಿಬಿಯಾ ರಾಜಧಾನಿ ಟ್ರಿಪೋಲಿಯಲ್ಲಿ ಹಿಂಸಾಚಾರ ಮುಂದುವರಿದಿದ್ದು, ತಕ್ಷಣವೇ ಭಾರತೀಯರು ಅಲ್ಲಿಂದ ಸ್ಥಳಾಂತರವಾಗಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸೂಚಿಸಿದ್ದಾರೆ.

’ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಭಾರತೀಯರ ಸ್ಥಳಾಂತರ ಕಷ್ಟವಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಲಿಬಿಯಾದಿಂದ ಹಲವು ಮಂದಿಯನ್ನು ಈಗಾಗಲೇ ಸ್ಥಳಾಂತರಿಸಲಾಗಿದ್ದರೂ ಟ್ರಿಪೋಲಿಯಲ್ಲಿ ಸುಮಾರು 500 ಮಂದಿ ಉಳಿದಿದ್ದಾರೆ.  ಟ್ರಿಪೋಲಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ. ಸದ್ಯ ವಿಮಾನಗಳ ಹಾರಾಟವೂ ಇದೆ. ಹೀಗಾಗಿ, ತಕ್ಷಣವೇ ಟ್ರಿಪೋಲಿಯಿಂದ ಹಿಂತಿರುಗುವಂತೆ ನಿಮ್ಮ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ತಿಳಿಸಿ. ವಿಳಂಬವಾದರೆ ಸ್ಥಳಾಂತರ ಕಷ್ಟಸಾಧ್ಯ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

  ಕಳೆದ ಎರಡು ವಾರಗಳಲ್ಲಿ ಹಿಂಸಾಚಾರದಿಂದ ಟ್ರಿಪೋಲಿಯಲ್ಲಿ ಸುಮಾರು 200 ಮಂದಿ ಸಾವಿಗೀಡಾಗಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !