‘ಆಯೋಗದ ಶಕ್ತಿ ಕ್ಷೀಣ’

ಭಾನುವಾರ, ಮೇ 26, 2019
22 °C

‘ಆಯೋಗದ ಶಕ್ತಿ ಕ್ಷೀಣ’

Published:
Updated:

ಬೆಂಗಳೂರು: 'ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಲ್ಲಿ ಚುನಾವಣಾ ಆಯೋಗವನ್ನು ಯಾರೂ ಈ ಪ್ರಮಾಣ ದಲ್ಲಿ ದುರುಪಯೋಗಪಡಿಸಿಕೊಂಡಿರಲಿಲ್ಲ. ಆಯೋಗದ ಶಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಕುಂದಿಸಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್ ಇಲ್ಲಿ ಶನಿವಾರ ಆರೋಪಿಸಿದರು.

ಲೋಕಸಭೆ ಚುನಾವಣೆ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಆಯೋಗಕ್ಕೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಚುನಾವಣೆ ದೂರುಗಳನ್ನು ಒಂದೆರಡು ಗಂಟೆಗಳಲ್ಲಿ ಪರಿಹರಿಸಬೇಕಿದ್ದರೂ, ನಿಧಾನ ಮಾಡಲಾಗುತ್ತಿದೆ. ಆ ಮೂಲಕ ಬಿಜೆಪಿ ನಾಯಕರ ರಕ್ಷಣೆ ಮಾಡಲಾಗುತ್ತಿದೆ. ಅಷ್ಟರ ಮಟ್ಟಿಗೆ ಆಯೋಗವನ್ನು ಪ್ರಧಾನಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಮೋದಿ, ಶಾ ವಿರುದ್ಧ ಈವರೆಗೆ 41 ದೂರುಗಳನ್ನು ಕಾಂಗ್ರೆಸ್ ನೀಡಿದೆ. ಅದರಲ್ಲಿ 8 ಗಂಭೀರ ಆರೋಪಗಳಿದ್ದು, ಒಂದರಲ್ಲಿ ಮಾತ್ರ ನಿರ್ಧಾರ ಪ್ರಕಟಿಸಿದೆ. ಉಳಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಧಾನಿ ಭಯ ಅಥವಾ ನಿವೃತ್ತಿ ನಂತರ ಸಿಗುವ ಲಾಭ, ಆಮಿಷಕ್ಕೆ ಒಳಗಾಗಿ ಈ ರೀತಿ ನಡೆದುಕೊಳ್ಳಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮೋದಿ ಪ್ರಧಾನಿ ಆದ ನಂತರ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಇಂಥವರು ಯುವಕರಿಗೆ ಮಾದರಿ ಯಾಗಬೇಕೇ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !