ಅಸಾಂಜ್ ವಿರುದ್ಧ ಮತ್ತೆ ವಿಚಾರಣೆ: ಸ್ವೀಡನ್‌ ನಿರ್ಧಾರ

ಸೋಮವಾರ, ಮೇ 20, 2019
32 °C

ಅಸಾಂಜ್ ವಿರುದ್ಧ ಮತ್ತೆ ವಿಚಾರಣೆ: ಸ್ವೀಡನ್‌ ನಿರ್ಧಾರ

Published:
Updated:
Prajavani

ಸ್ಟಾಕ್‌ಹೋಂ : ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌ ವಿರುದ್ಧದ 2010ರ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಮತ್ತೆ
ಕೈಗೆತ್ತಿಕೊಳ್ಳುವುದಾಗಿ ಸ್ವೀಡನ್‌ ತಿಳಿಸಿದೆ.

‘ಪ್ರಕರಣದ ಪುನರ್‌ವಿಚಾರಣೆ ಅಗತ್ಯವಿದೆ. ಅಸ್ಸಾಂಜ್‌ ಅತ್ಯಾಚಾರ ಎಸಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ಮತ್ತೆ ವಿಚಾರಣೆ
ನಡೆಸಲು ನಿರ್ಧರಿಸಿದ್ದೇವೆ’ ಎಂದು ಪಬ್ಲಿಕ್‌ ಪ್ರಾಸಿಕ್ಯೂಷನ್‌ ಉಪ ನಿರ್ದೇಶಕಿ ಇವಾ ಮೇರಿ ಪರ್ಸಾನ್‌ ತಿಳಿಸಿದ್ದಾರೆ.

ಸ್ವೀಡನ್‌ನಲ್ಲಿ 2010ರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಅಸಾಂಜ್‌ ಮೇಲಿತ್ತು. ಆದರೆ ಈ ಪ್ರಕರಣದ ವಿಚಾರಣೆಯನ್ನು 2017ರಲ್ಲಿ ಕೈಬಿಡಲಾಗಿತ್ತು. ತಮ್ಮ ವಿರುದ್ಧದ ಆರೋಪವನ್ನು ಅಸ್ಸಾಂಜ್‌ ಅಲ್ಲಗಳೆದಿದ್ದರು. 

ಅಸಾಂಜ್‌ ಬಂಧನದ ಬಳಿಕ, ಪ್ರಕರಣದ ಮರುವಿಚಾರಣೆಗೆ ಕೋರುವುದಾಗಿ ಸಂತ್ರಸ್ತೆ ಪರ ವಕೀಲೆ ಹೇಳಿದ್ದರು. 

47 ವರ್ಷದ ಅಸಾಂಜ್‌ ಸದ್ಯ ಲಂಡನ್‌ ಜೈಲಿನಲ್ಲಿದ್ದಾರೆ.  ಏಳು ವರ್ಷಗಳ ಹಿಂದೆ ಬ್ರಿಟನ್‌ ಕೋರ್ಟ್‌ ವಿಧಿಸಿದ್ದ ಜಾಮೀನು ಷರತ್ತಿನ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಸಾಂಜ್‌ ಅವರಿಗೆ 50 ವಾರಜೈಲು ಶಿಕ್ಷೆ ವಿಧಿಸಲಾಗಿದೆ.

ಸ್ವೀಡನ್‌ಗೆ ಹಸ್ತಾಂತರವಾಗುವುದನ್ನು ತಪ್ಪಿಸಲು ಅಸಾಂಜ್‌ ಈಕ್ವೇಡಾರ್‌ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದರು. ಅಸಾಂಜ್‌ ಬಂಧನಕ್ಕೆ 2012ರ ಜೂನ್‌ನಲ್ಲಿ ವಾರಂಟ್‌ ಹೊರಡಿಸಲಾಗಿತ್ತು. ನೀಡಿದ್ದ ಆಶ್ರಯವನ್ನು ಈಕ್ವೆಡಾರ್‌ ಹಿಂತೆಗೆದುಕೊಂಡ ಬೆನ್ನಲ್ಲೇ ಅವರನ್ನು ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರು ಇದೇ ಏಪ್ರಿಲ್‌ 11 ರಂದು ಬಂಧಿಸಿದ್ದರು. ಈ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲಾಗಿತ್ತಾದರೂ, ಷರತ್ತು ಉಲ್ಲಂಘಿಸಿದ್ದರಿಂದ ಮತ್ತೆ ಬಂಧಿಸಲಾಗಿದೆ. 

ಅಸಾಂಜ್‌ ಈಕ್ವೆಡಾರ್ ಆಶ್ರಯದಲ್ಲಿಯೇ ಇದ್ದುದರಿಂದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಎರಡು ವರ್ಷಗಳ ಹಿಂದೆ
ಸ್ವೀಡನ್‌ ಕೈಬಿಟ್ಟಿತ್ತು. ಆದರೆ, ಈಗ ಲಂಡನ್‌ ಜೈಲಿನಲ್ಲಿ ಇರುವುದರಿಂದ ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡುವು
ದಾಗಿ ಬ್ರಿಟನ್‌ ಸರ್ಕಾರ ಹೇಳಿರುವುದರಿಂದ ಸ್ವೀಡನ್‌ ಮತ್ತೆ ವಿಚಾರಣೆ ನಡೆಸಲು ನಿರ್ಧರಿಸಿದೆ. ತಮ್ಮ ವಿರುದ್ಧದ ಆರೋಪ ಸುಳ್ಳು ಎಂಬುದನ್ನು ಸಾಬೀತು ಪಡಿಸಲು ಅಸಾಂಜ್‌ಗೆ ಮತ್ತೊಂದು ಅವಕಾಶವನ್ನೂ ನೀಡಲಾಗುವುದು ಎಂದು ಸ್ವೀಡನ್‌ ಹೇಳಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !