ವೇಳಾಪಟ್ಟಿಯಂತೆ ಪುರಸಭೆ ಚುನಾವಣೆ

ಶುಕ್ರವಾರ, ಮೇ 24, 2019
23 °C

ವೇಳಾಪಟ್ಟಿಯಂತೆ ಪುರಸಭೆ ಚುನಾವಣೆ

Published:
Updated:
Prajavani

ಬೆಂಗಳೂರು: ‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪುರಸಭೆ ಚುನಾವಣೆ ಮುಂದೂಡಲು ನಿರ್ದೇಶಿಸ
ಬೇಕು’ ಎಂದು ಕೋರಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿದೆ.

ಈ ಕುರಿತಂತೆ ನೆಲಮಂಗಲದ ಎನ್.ಪಿ.ಹೇಮಂತಕುಮಾರ್ ಮತ್ತು ಎ.ಪಿಳ್ಳಪ್ಪ ಸಲ್ಲಿಸಿದ್ದ ರಿಟ್ ಅರ್ಜಿಗಳ ಮೇಲಿನ ಕಾಯ್ದಿರಿಸಿದ ಆದೇಶವನ್ನು ನ್ಯಾಯಮೂರ್ತಿ ಬಿ.ಎಂ‌.ಶ್ಯಾಮಪ್ರಸಾದ್ ಅವರಿದ್ದ ರಜಾಕಾಲದ ಏಕಸದಸ್ಯ ವಿಶೇಷ ನ್ಯಾಯಪೀಠ ಸೋಮವಾರ ಪ್ರಕಟಿಸಿದೆ. ಇದರಿಂದಾಗಿ ನಿಗದಿತ ವೇಳಾಪಟ್ಟಿಯಂತೆ ಚುನಾವಣೆ ನಡೆಯಲಿದೆ.

‘ಈಗ ಚುನಾವಣೆ ನಡೆಸಿದರೆ ನಗರಸಭೆಯಾಗಿ‌ ಮೇಲ್ದರ್ಜೆಗೆ ಏರಿದ ನಂತರ ಮತ್ತೆ ಚುನಾವಣೆ ಮಾಡಬೇಕಾಗುತ್ತದೆ. ಆದ್ದರಿಂದ ನಗರಸಭೆಯಾಗಿ ಪರಿವರ್ತನೆಯಾದ ನಂತರವೇ ಚುನಾವಣೆ ನಡೆಸಲು ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದರು.

ಆದರೆ, ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸಿರುವ ನ್ಯಾಯಪೀಠ, ‘ಚುನಾವಣಾ ಆಯೋಗ ಈಗಾಗಲೇ ವೇಳಾಪಟ್ಟಿಯ ಅಧಿಸೂ
ಚನೆ ಹೊರಡಿಸಿದೆ. ಆದ್ದರಿಂದ ಚುನಾವಣೆ ಪ್ರಕ್ರಿಯೆಯಲ್ಲಿ ಕೋರ್ಟ್‌ ಮಧ್ಯಪ್ರವೇಶ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರ ನೆಲಮಂಗಲ ಪುರಸಭೆಯನ್ನು 2019ರ ಫೆಬ್ರುವರಿ 25ರಂದು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಿ, ಈ ಕುರಿತ ಶಿಫಾರಸನ್ನು ರಾಜ್ಯಪಾಲರಿಗೆ ಕಳುಹಿಸಿತ್ತು. ಆದರೆ, ರಾಜ್ಯಪಾಲರು, ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂಬ ಕಾರಣಕ್ಕೆ ಕಡತವನ್ನು ಹಿಂದಿರುಗಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !